ಹೆಣ್ಣುಮಗುವಿಗೆ ಜನ್ಮ ನೀಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ದಂಪತಿ…

43
firstsuddi

ಚಂಡೀಗಢ: ಪಂಜಾಬ್‌ನ 17ನೇ ಮುಖ್ಯಮಂತ್ರಿ, ಭಗವಂತ್ ಸಿಂಗ್ ಮಾನ್ ಮತ್ತು ಅವರ ಎರಡನೇ ಪತ್ನಿ ಗುರುಪ್ರೀತ್ ಕೌರ್ (35 ವರ್ಷ) ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ಭಗವಂತ್ ಮಾನ್, ತಮ್ಮ ಹೆಣ್ಣು ಮಗುವಿನ ಫೋಟೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಆ ದೇವರು ನನಗೆ ಹೆಣ್ಣುಮಗುವನ್ನು ಉಡುಗೊರೆಯಾಗಿ ನೀಡಿದ್ದಾನೆ, ತಾಯಿ, ಮಗು ಸುರಕ್ಷಿತವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

2015ರಲ್ಲಿ ಭಗವಂತ್ ಮಾನ್ ತನ್ನ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್‌ನಿಂದ ವಿಚ್ಛೇದನದ ನಂತರ ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದ್ದರು. ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ತಿಂಗಳ ನಂತರ 2022ರಲ್ಲಿ ಅವರ ಎರಡನೇ ವಿವಾಹವು ಲಕ್ಷಾಂತರ ಜನರನ್ನು ಆಘಾತಕ್ಕೀಡು ಮಾಡಿತು. ಚಂಡೀಗಢದ ಅವರ ನಿವಾಸದಲ್ಲಿ ಖಾಸಗಿ ಸಮಾರಂಭದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅವರು ತಮ್ಮ ಮೊದಲ ಮದುವೆಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಮಗಳ ಹೆಸರು ಸೀರತ್ ಕೌರ್ ಮತ್ತು ಮಗನ ಹೆಸರು ದಿಲ್ಶನ್ ಸಿಂಗ್ ಮಾನ್ ಇವರು ಕೆನಡಾದಲ್ಲಿ ನೆಲೆಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಿಎಂ ಮನ್ ತಮ್ಮ ಭಾಷಣದಲ್ಲಿ ತಮ್ಮ ಪತ್ನಿ ಗುರುಪ್ರೀತ್ ಕೌರ್ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಗುರುಪ್ರೀತ್ ಕೌರ್ ಮೂಲತಃ ಹರಿಯಾಣದ ಪೆಹೋವಾದವರು ಮತ್ತು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಡಾ.ಗುರ್ ಪ್ರೀತ್ ಕೌರ್ ಸಿಎಂ ಭಗವಂತ್ ಮಾನ್ ಗಿಂತ 16 ವರ್ಷ ಚಿಕ್ಕವರಾಗಿದ್ದಾರೆ.