ಮಕ್ಕಳಾಗಿಲ್ಲ ಎಂದು ಕಿರುಕುಳ- ಮನನೊಂದು ಮಹಿಳೆ ಆತ್ಮಹತ್ಯೆ…

39
firstsuddi

ಶಿವಮೊಗ್ಗ: ಮಕ್ಕಳಾಗಿಲ್ಲ ಎಂಬ ಕಿರುಕುಳಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಗಾಡಿಕೊಪ್ಪದ ಮನೆಯೊಂದರಲ್ಲಿ ನಡೆದಿದೆ.

ಅಶ್ವಿನಿ(31) ನೇಣಿಗೆ ಶರಣಾದ ಮಹಿಳೆ. ಇವರು ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಹಿನ್ನಲೆ ಪತಿ ಅಭಿಷೇಕ್ ಹಾಗೂ ಮನೆಯವರಿಂದ ಕಿರುಕುಳ ಆರೋಪ ಕೇಳಿಬಂದಿದೆ. ಇದರಿಂದ ನೇಣು ಬಿಗಿದುಕೊಂಡು ಮಹಿಳೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.