ರಾಮನಗರ: ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ಮ ಅಪ್ರಾಪ್ತ ಪತ್ನಿಯನ್ನು ಕೊಂದು ರಾತ್ರಿಯಿಡೀ ಶವದ ಜೊತೆ ಮಲಗಿದ ಅಮಾನುಷ ಘಟನೆ ನಡೆದಿದೆ. ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿ 2021 ರಲ್ಲಿ 13 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆ ಆಗಿದ್ದ. ಇವರಿಗೆ ಒಂದು ಮಗು ಕೂಡ ಇದೆ. ಕೆಲ ದಿನಗಳಿಂದ ಅಪ್ರಾಪ್ತೆ ಮೇಲೆ ಅನುಮಾನಗೊಂಡಿದ್ದ ಆರೋಪಿ, ಮೊದಲಿನಂತೆ ಲೈಂಗಿಕವಾಗಿ ತೊಡಗುತ್ತಿಲ್ಲ ಎಂಬ ಕಾರಣಕ್ಕೆ ಜಗಳ ಶುರುವಾಗಿತ್ತು.
ಹೀಗೆ ಶುರುವಾದ ಜಗಳ ಅತಿರೇಕಕ್ಕೆ ಹೋಗಿ ಕಳೆದ ತಿಂಗಳ ಮಾ. 27ರ ರಾತ್ರಿಯಂದು ಅಪ್ರಾಪ್ತೆ ಪತ್ನಿಯನ್ನ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ರಾತ್ರಿ ಇಡೀ ಶವದ ಜೊತೆಯೇ ಮಲಗಿದ ಆತ, ಬೆಳಿಗ್ಗೆ ಎದ್ದು ತಾನೇ ಅಪ್ರಾಪ್ತೆ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದನು. ಬಳಿಕ ಜ್ವರ ಬಂದಿದೆ, ಹುಷಾರಿಲ್ಲ ಆಸ್ಪತ್ರೆ ಗೆ ಬನ್ನಿ ಎಂದು ಪತ್ನಿಯ ಕುಟುಂಬಸ್ಥರನ್ನು ಕರೆದಿದ್ದ. ನಂತರ ಶವ ಪರೀಕ್ಷೆ ಬಳಿಕ ಅನುಮಾನ ಗೊಂಡ ವೈದ್ಯರು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಆರೋಪಿ ಹಾವಾಭಾವ ಕಂಡು ಕನಕಪುರ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿರುವ ಕನಕಪುರ ಗ್ರಾಮಾಂತರ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










