ಕೊಡಗು- ಕೊಡಗಿನ ಸಂತ್ರಸ್ತರಿಗಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಾವೇ ಖುದ್ದಾಗಿ ಸಾಮಗ್ರಿಗಳನ್ನು ಜೋಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಳತೆಗೆ ಹೆಸರುವಾಸಿಯಾಗಿರುವ ಸುಧಾಮೂರ್ತಿ ಅವರು ಪ್ರವಾಹಕ್ಕೆ ತುತ್ತಾಗಿ, ಸಂಕಷ್ಟ ಅನುಭವಿಸುತ್ತಿರುವ ಕೊಡಗಿನ ಜನರಿಗೆ ಸುಧಾಮೂರ್ತಿ ಅವರು ತಾವೇ ಖುದ್ದಾಗಿ ಸಾಮಗ್ರಿಗಳನ್ನು ಜೋಡಿಸಿ ಸಾಮಾಗ್ರಿಗಳನ್ನು ಚೀಲದಲ್ಲಿ ತುಂಬುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇವರನ್ನು ನೋಡಿ ಕಲಿಯೋದು ತುಂಬಾ ಇದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ, ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಜನತೆ ಪಾಲಿಗೆ ಸುಧಾ ಮೂರ್ತಿ ಅವರು ಅಮ್ಮ ಆಗಿದ್ದಾರೆ ಎಂದು ಅವರ ನಡೆಯನ್ನು ಶ್ಲಾಘಿಸಿದ್ದಾರೆ









