ಕೊಡಗು – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಕುಶಾಲನಗರ ಪರಿಹಾರ ಕೇಂದ್ರ, ಚಾಮುಂಡೇಶ್ವರಿ ಪರಿಹಾರ ಕೇಂದ್ರ, ಇಂದಿರಾನಗರ ಬಡಾವಣೆ, ಮಳೆಯಿಂದ ಕೊಚ್ಚಿಹೋಗಿರುವ ಕಟಗೇರಿ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು,ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು, ಆಲಿಸಿದ್ದು ಸಿದ್ದರಾಮಯ್ಯ ಇಂದು ರಾತ್ರಿ ಕೊಡಗಿನಲ್ಲೇ ವಾಸ್ತವ್ಯ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.