ಬೆಂಗಳೂರು- ಪುತ್ರನ ಮದುವೆ ಮಾಡಿ ಭರ್ಜರಿ ಬೀಗರ ಊಟಕ್ಕೆ ಮೀಸಲಿಟ್ಟ 10 ಲಕ್ಷ ರೂಗಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು ಕೊಡಗು ಸಂತ್ರಸ್ತರಿಗೆ ನೀಡಿ ಮಾನವಿಯತೆ ಮೇರೆದಿದ್ದಾರೆ. ಕಾವೇರಿ ನೀರಿನ ಋಣ ತಮ್ಮ ಮೇಲಿದೆ ಕೊಡಗಿನ ಜನ ಕಷ್ಟದಲ್ಲಿರುವಾಗ ನಾವು ಬೀಗರ ಊಟ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂದು ಸಚಿವರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ.