ಚಿಕ್ಕಮಗಳೂರು : ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಯುವಕರ ತಂಡ ಅಪಾಯಕಾರಿ ರಿವರ್ ರ್ಯಾಪ್ಟಿಂಗ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿ ನಡೆದಿದ್ದು, ಪ್ರವಾಸಕ್ಕೆಂದು ಬಂದ ಯುವಕರ ತಂಡ ಮೂಡಿಗೆರೆಯ ಕಳಸದಿಂದ – ಮಾಗುಂಡಿ ಬಳಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ರಿವರ್ ರ್ಯಾಪ್ಟಿಂಗ್ ಮಾಡುವ ಮೂಲಕ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ.ಇನ್ನು ಈಗಾಗಲೇ ಜಿಲ್ಲೆಯ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿದ್ರು,ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಖಾಸಗಿ ಸಂಸ್ಥೆಯೊಂದಕ್ಕೆ ರ್ಯಾಪ್ಟಿಂಗ್ ಮಾಡಲು ಅನುಮತಿ ನೀಡಿರೋದಕ್ಕೆ ಸ್ಥಳೀಯರು ಗರಂ ಆಗಿದ್ದಾರೆ.ಒಂದೂ ಕಡೆ ಅಪಾಯಕಾರಿಯಾಗಿ ಹರಿಯುತ್ತಿರುವ ನದಿ ಬಳಿ ತೆರಳದಂತೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ವಾರದ ಹಿಂದೆ ಮನವಿ ಹೋಮ್ ಸ್ಟೇ,ರೆಸಾರ್ಟ್ ಹಾಗೂ ಪ್ರವಾಸಿಗರಲ್ಲಿ ಮನವಿ ಮಾಡಿಕೊಂಡಿದ್ರು ಕ್ಯಾರೆ ಅನ್ನದ ಪ್ರವಾಸೋದ್ಯಮ ಇಲಾಖೆ ರಿವರ್ ರ್ಯಾಫ್ಟಿಂಗ್ ಗೆ ಅನುಮತಿ ನೀಡಿದೆ.ಏನಾದ್ರು ಹೆಚ್ಚು ಕಡಿಮೆ ಆದ್ರೇ ಯಾರು ಹೊಣೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Home ಸ್ಥಳಿಯ ಸುದ್ದಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಭದ್ರಾ ನದಿಯಲ್ಲಿ ರ್ಯಾಪ್ಟಿಂಗ್ ಮಾಡಲು ಅನುಮತಿ ನೀಡಿರೋದಕ್ಕೆ ಸ್ಥಳೀಯರ ಆಕ್ರೋಶ.