ಗುಡ್‍ನ್ಯೂಸ್: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ ಭಾಗ್ಯ.

26
Teacher with students around explaining or teaching from book on classroom - concept of support, education, assistance and guidance.

ಬೆಂಗಳೂರು: ಕಳೆದ ಎರಡು ಮೂರು ವರ್ಷದಿಂದ ಸರ್ಕಾರಿ ಶಾಲಾ ಮಕ್ಕಳಲ್ಲಿ ಗಣಿತ ವಿಜ್ಞಾನ  ಇಂಗ್ಲೀಷ್ ವಿಷಯಗಳು ಕಬ್ಬಿಣದ ಕಡಲೆಯಾಗಿದೆ. ಹೀಗಾಗಿಯೇ ಖಾಸಗಿ ಶಾಲಾ ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚುವರಿ ಶಿಕ್ಷಣ ನೀಡಲು ಪ್ರೈವೆಟ್ ಟ್ಯೂಷನ್ ಸೆಂಟರ್ ಗಳಿಗೆ ಹಾಕುತ್ತಿದ್ದಾರೆ. ಹೆಚ್ಚುವರಿ ಶಿಕ್ಷಣಕ್ಕೆ ಇದು ಅನಕೂಲವಾಗುತ್ತಿದೆ. ತಗರತಿಯ ಹೆಚ್ಚುವರಿ ಸಮಸ್ಯೆಗಳನ್ನ ಈ ಕ್ಲಾಸ್ ಗಳಲ್ಲಿ ಸರಿಪಡಿಸಿಕೊಂಡು ಕಲಿಯುತ್ತಾರೆ. ಆದ್ರೆ ಇತಂಹ ಸೌಲಭ್ಯ ಬಡ ಪೋಷಕರ ಮಕ್ಕಳಿಗೆ ಇಲ್ಲದಂತಾಗಿತ್ತು. ದುಬಾರಿ ಹಣ ನೀಡಿ ಟ್ಯೂಷನ್ ಗೆ ಕಳಿಸಲು ಕಷ್ಟಪಡುತ್ತಿದ್ದರು. ಈಗ ಸರ್ಕಾರಿ ಶಾಲಾ ಮಕ್ಕಳಿಗೆ ಇತಂಹ ಸೌಲಭ್ಯವನ್ನ ಉಚಿತವಾಗಿ ನೀಡಲು ಕರ್ನಾಟಕ ಶಿಕ್ಷಣ ಇಲಾಖೆ ಮುಂದಾಗಿದೆ. ಇಷ್ಟು ದಿನ ಪೋಷಕರು ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ತಮ್ಮ ಮಕ್ಕಳನ್ನು ಖಾಸಗಿ ಟ್ಯೂಷನ್ ಸೆಂಟರ್ ಗಳಿಗೆ ಸೇರಿಸುತ್ತಿದ್ದರು. ವಿದ್ಯಾರ್ಥಿ ಯಾವ ತರಗತಿಯ ವಿಷಯದಲ್ಲಿ ಹಿಂದೆ ಇದ್ದಾನೆ ಎಂದು ಅರ್ಥ ಮಾಡಿಕೊಂಡು ಸ್ಪೆಷಲ್ ಟ್ಯೂಷನ್‍ಗೆ ಕಳುಹಿಸುತ್ತಿದ್ದಾರೆ. ಈಗ ಈ ಭಾಗ್ಯ ಸರ್ಕಾರಿ ಶಾಲೆಗಳ ಮಕ್ಕಳಿಗೂ ಬರುತ್ತಿದೆ. ಮುಂಜಾನೆ ಹಾಗೂ ಸಂಜೆ ಶಾಲೆಯ ಆರಂಭಕ್ಕೂ ಮೊದಲು ಒಂದು ಗಂಟೆ ಹಾಗೂ ಶಾಲೆ ಅವಧಿ ಮುಗದ ಬಳಿಕ ಒಂದು ಕ್ಲಾಸ್ ಶಿಕ್ಷಕರು ಮಕ್ಕಳಿಗೆ ವಿಶೇಷ ತರಗತಿ ತಗೆದುಕೊಳ್ಳುತ್ತಿದ್ದಾರೆ. 1 ರಿಂದ 12 ನೇ ತರಗತಿಯಲ್ಲಿನ ಮಕ್ಕಳಿಗೆ ಇದು ಆರಂಭವಾಗುತ್ತಿದೆ. ಯಾವ ತರಗತಿಯಲ್ಲಿ ಹಿನ್ನಡೆ ಇದ್ದಾರೆ ಎಂದು ಶಾಲಾ ಶಿಕ್ಷಕರೇ ಗುರುತಿಸಿ ಆ ವಿಷಯದಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನ ಈ ಸ್ಪೆಷಲ್ ಕ್ಲಾಸ್‍ಗೆ ಕಳುಹಿಸುತ್ತಾರೆ. ಒಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು ಸರ್ಕಾರಿ ಶಾಲಾ ಶಿಕ್ಷಕರನ್ನೇ ಬಳಕೆ ಮಾಡಿಕೊಂಡು ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಆದ್ರೆ ಇದು ಹೇಳಿಕೆಗೆ ಮಾತ್ರ ಸೀಮಿತವಾಗುತ್ತಾ ಅಥವಾ ಜಾರಿಯಾಗುತ್ತಾ ಎಂದು ಕಾದುನೋಡಬೇಕಿದೆ.