ಬೆಂಗಳೂರು: ವೈದ್ಯಕೀಯ ಸೌಲಭ್ಯ ಪಡೆಯುವ ಉದ್ದೇಶದಿಂದ ಬ್ರಿಟನ್ ರಾಜ, ಕಿಂಗ್ಸ್ ಚಾರ್ಲ್ಸ್ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ವೈಟ್ಫೀಲ್ಡ್ ಬಳಿಯ ಆರೋಗ್ಯ ಕೇಂದ್ರದಲ್ಲೇ ಅವರು ನೆಲೆಸಿದ್ದಾರೆ. ಕಳೆದ ವರ್ಷ ಮೇ 6 ರಂದು ಬ್ರಿಟನ್ ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ಬಳಿಕ ಚಾರ್ಲ್ಸ್, ಬೆಂಗಳೂರಿಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ರಾಜಕುಮಾರನ ಜೊತೆ ರಾಣಿ ಕ್ಯಾಮಿಲಾ ಕೂಡ ಆಗಮಿಸಿದ್ದಾರೆ. ಮೂರು ದಿನದ ಪ್ರವಾಸ ಕೈಗೊಂಡಿರುವ ದಂಪತಿ ಹೋಲಿಸ್ಟಿಕ್ ಕೇಂದ್ರಕ್ಕೆ ಭೇಟಿ ನೀಡಲಿದೆ. ಹೊಸ ಪುನರ್ಜೀವನ ನೀಡುವ ಈ ಚಿಕಿತ್ಸೆಯಲ್ಲಿ ಯೋಗ, ಧ್ಯಾನ ಸೇರಿದಂತೆ ಇತರ ಥೆರಪಿಗಳಿರಲಿವೆ ಎಂದು ತಿಳಿದು ಬಂದಿದೆ. ಈ ಹೋಲಿಸ್ಟಿಕ್ ಕೇಂದ್ರಕ್ಕೆ ಕಿಂಗ್ ಚಾರ್ಲ್ಸ್ ಈ ಹಿಂದೆ ಕೂಡ ಭೇಟಿ ನೀಡಿದ್ದರು.










