ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನಡೆಸಲಾದ ಲಿಖಿತ ಪರೀಕ್ಷೆ ಫಲಿತಾಂಶ ಪ್ರಕಟ.

39

ಬೆಂಗಳೂರು: 1,000 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳಿಗೆ ನಡೆಸಲಾದ ಲಿಖಿತ ಪರೀಕ್ಷೆ ಅಂತಿಮ ಅಂಕ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. ಹಾಗೇ ಜಿಲ್ಲಾವಾರು ಅಂಕ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದ ಮೂಲಕ ಜಿಲ್ಲಾವಾರುಗಳ ಪಟ್ಟಿ ಕೂಡ ವೀಕ್ಷಣೆ ಮಾಡಬಹುದಾಗಿದೆ. ಈ ಅಂತಿಮ ಸ್ಕೋರ್ ಪಟ್ಟಿ ಆಯ್ಕೆ ಆಧಾರದ ಮೇಲೆ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಸಲಾಗುವುದು. ಈ ಪ್ರಕ್ರಿಯೆ ಬಳಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಕಂದಾಯ ಇಲಾಖೆಯಲ್ಲಿನ 1,000 ಗ್ರಾಮ ಆಡಳಿತ ಹುದ್ದೆಗಳಿಗೆ ಸೆಪ್ಟೆಂಬರ್ 29 ರಂದು ರಾಜ್ಯದೆಲ್ಲೆಡೆ ಪರೀಕ್ಷೆ ನಡೆಸಲಾಗಿತ್ತು. ಈ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆಯ ಕೀ ಉತ್ತರಗಳನ್ನು ಅಕ್ಟೋಬರ್ 10 ರಂದು ಪ್ರಕಟಿಸಲಾಗಿತ್ತು. ಅಕ್ಟೋಬರ್ 27 ರಂದು ಗ್ರಾಮಾಡಳಿತ ಪರೀಕ್ಷೆಯ ಪತ್ರಿಕೆ- 1 ಮತ್ತು ಪತ್ರಿಕೆ 2ರ ಪರೀಕ್ಷೆ ನಡೆದಿತ್ತು. ಇದರ ಕೀ ಉತ್ತರವನ್ನು ನವೆಂಬರ್ 27 ರಂದು ಪ್ರಕಟಿಸಲಾಗಿತ್ತು. ಇದೀಗ ಕಡ್ಡಾಯ ಕನ್ನಡ ಮತ್ತು ಪತ್ರಿಕೆ- 1 ಮತ್ತು ಪತ್ರಿಕೆ 2ರಲ್ಲಿ ಶೇ 35ರಷ್ಟು ಅಂಕಗಳನ್ನು ಗಳಿಸಿ ಅರ್ಹರಾದವರ ಪಟ್ಟಿ ಬಿಡುಗಡೆ ಮಾಡಲಾಗಿದೆ.