ಎಲ್‍ಪಿಜಿ ಸಿಲಿಂಡರ್ ದರಗಳ ಇಳಿಕೆ.

65

ನವದೆಹಲಿ: ಇಂಡಿಯನ್ ಆಯಿಲ್ ಇತ್ಯಾದಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಹೊಸ ವರ್ಷಕ್ಕೆ ಎಲ್‍ಪಿಜಿ ಸಿಲಿಂಡರ್ ಬೆಲೆಗಳನ್ನು ಇಳಿಕೆ ಮಾಡಿವೆ. ಕಮರ್ಷಿಯಲ್ ಎಲ್‍ಪಿಜಿ ಗ್ಯಾಸ್‍ಗಳು ಕೊಂಚ ಕಡಿಮೆ ಬೆಲೆಕಂಡಿದೆ. 19 ಕಿಲೋ ಕಮರ್ಷಿಯಲ್ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 14.5 ರೂಪಾಯಿ ನಿಂದ 16 ರೂಪಾಯಿವರೆಗೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 14.5 ರೂಪಾಯಿ ನಷ್ಟು ಕಡಿಮೆ ಆಗಿದೆ. 47 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ 36.50 ರೂನಷ್ಟು ಇಳಿಕೆ ಆಗಿದೆ. ಆದರೆ, ಮನೆ ಬಳಕೆಯ ಅಡುಗೆ ಅನಿಲ ಗ್ಯಾಸ್‍ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಮರ್ಷಿಯಲ್ ಸಿಲಿಂಡರ್‌ಗಳ ಬೆಲೆ 6 ತಿಂಗಳ ನಂತರ ಮೊದಲ ಬಾರಿಗೆ ಇಳಿಕೆ ಆಗಿದೆ. 14.2 ಕಿಲೋ ಮತ್ತು 5 ಕಿಲೋ ಎಲ್‍ಪಿಜಿ ಸಿಲಿಂಡರ್‌ಗಳು ಮನೆಬಳಕೆಗೆ ಸೀಮಿತವಾಗಿವೆ. 19 ಕಿಲೋ ಮತ್ತು 47 ಕಿಲೋ ಸಿಲಿಂಡರ್‌ಗಳು ವಾಣಿಜ್ಯ ಬಳಕೆಗೆ ಇವೆ. ಜುಲೈ 1ರ ನಂತರ 19 ಕಿಲೋ ಸಿಲಿಂಡರ್‌ಗಳ ಬೆಲೆ ಮೊದಲ ಬಾರಿಗೆ ಕಡಿಮೆ ಆಗಿದೆ. ಮನೆಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ ಮಾರ್ಚ್ 1ರಂದು ಕಡಿಮೆ ಆಗಿತ್ತು. ಅದಾದ ನಂತರ ಯಾವ ಬದಲಾವಣೆ ಆಗಲಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನದಂದು ದರ ಮರುಪರಿಶೀಲನೆ ಮಾಡುತ್ತವೆ.