ಪಟಾಕಿ ಸಿಡಿಸಿ, ಭರ್ಜರಿ ಆಚರಣೆಯಿಂದ ಹೊಸ ವರ್ಷವನ್ನು ಸ್ವಾಗತಿಸಿದ ಮಲೆನಾಡಿನ ಮಂದಿ.

19

ಶಿವಮೊಗ್ಗ: 2025ನೇ ಹೊಸ ವರ್ಷವನ್ನು ಮಲೆನಾಡ ಜನತೆ ಅತ್ಯಂತ ವಿಜೃಂಭಣೆಯ ಆಚರಣೆಯಿಂದ ಬರ ಮಾಡಿಕೊಂಡಿದ್ದಾರೆ. ಹಾಗೂ 2024 ಅನ್ನು ಸಂತೋಷದಿಂದ ಬಿಳ್ಕೋಟ್ಟಿದ್ದಾರೆ. ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಅತ್ಯಂತ ಪ್ರೀತಿಯ ಸಂಭ್ರಮದಿಂದ ಸ್ವಾಗತಿಸಿದರು. ಜಿಲ್ಲೆಯ ವಿವಿಧ ರೆಸಾರ್ಟ್, ಕ್ಲಬ್‍ಗಳಲ್ಲಿ ಹೊಸ ವರ್ಷದ ಆಚರಣೆಗಾಗಿ ವಿವಿಧ ಈವೆಂಟ್ಸ್, ಡಿಜೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತಡರಾತ್ರಿ 12 ಗಂಟೆ ಆಗುವುದನ್ನು ಕಾಯುತ್ತಿದ್ದ ಯುವ ಜನತೆ ಕುಣಿದು ಕುಪ್ಪಣಿಸುತ್ತಾ ಹೊಸ ವರ್ಷವನ್ನು ಸ್ವಾಗತ ಮಾಡಿದರು. ಶಿವಮೊಗ್ಗದ ಸಾಗರದ ಗ್ರೀನ್ ಆ್ಯಂಬಾಸಿ, ಕಂಟ್ರಿ ಕ್ಲಬ್ ಹಾಗೂ ತ್ಯಾಗರ್ತಿ ಕ್ರಾಸ್ ಮತ್ತು ಮಲೆನಾಡ್ ಶೈರ್‍ನಲ್ಲಿ ಹೊಸ ವರ್ಷಕ್ಕಾಗಿ ವಿವಿಧ ರೀತಿಯ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಗರದ ಕಂಟ್ರಿ ಕ್ಲಬ್‍ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬೆಂಗಳೂರಿನ ಒನ್ ನೈಟ್ ಇನ್ ಟುಮಾರೋ ಲ್ಯಾಂಡ್ ಎಂಬ ಆಯೋಜಿಸಲಾಗಿದ್ದ ಈವೆಂಟ್‍ನಲ್ಲಿ ಎಲ್ಲಾ ವಯಸ್ಸಿನವರು ಭಾಗವಹಿಸಿ ಅತ್ಯಂತ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ.