ಏರೋ ಇಂಡಿಯಾ ಶೋ ತಾಂತ್ರಿಕ ಸಾಮರ್ಥ್ಯದ ಮಹಾಕುಂಭ: ಸಚಿವ ರಾಜನಾಥ್ ಸಿಂಗ್.

30

ಬೆಂಗಳೂರು: ಏರೋ ಇಂಡಿಯೋ ಶೋ ಕೇವಲ ಜಾಗತಿಕ ರಕ್ಷಣಾ ವಲಯದಲ್ಲಿ ಕೊಳ್ಳುವ ಮತ್ತು ಮಾರಾಟಗಾರರ ಸಂಬಂಧಗಳಿಗೆ ಸೀಮಿತವಾಗಿಲ್ಲ. ಅದಕ್ಕೂ ಮೀರಿ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಪರಿವರ್ತನೆ ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಯಲಹಂಕದ ವಾಯು ನೆಲೆಯಲ್ಲಿ ಸಾಗುತ್ತಿರುವ ಏರೋ ಇಂಡಿಯಾ 15ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಏರೋಶೋ ಸಂಬಂಧವೂ ಕೇವಲ ವಹಿವಾಟಿನ ಮಟ್ಟದಲ್ಲಿದೆ. ನಾವು ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆ ಗುರಿ ಜೊತೆಗೆ ಸಹಯೋಗವನ್ನು ಮಾಡಬೇಕಿದೆ ಎಂದರು. ಈ ಬಾರಿಯ ಏರೋಶೋದಲ್ಲಿ ವೈಮಾನಿಕ ಸಂಸ್ಥೆಗಳು ಮತ್ತು ಮಿಲಿಟರಿ ಸಾಮಥ್ರ್ಯಗಳ ಪ್ರದರ್ಶನದ ಜೊತೆಗೆ ಹಲವು ಪ್ರಮುಖ ಘೋಷಣೆ ಮತ್ತು ಸಹಭಾಗಿತ್ವಗಳು ನಡೆಯಲಿದೆ. 4 ದಿನಗಳ ಕಾಲ ಸಾಗುವ ಈ ಶೋದಲ್ಲಿ 450 ದೇಶಿಯ ಮತ್ತು 50ಕ್ಕೂ ಹೆಚ್ಚು ವಿದೇಶಿ ವಿಮಾನಗಳ ಸಾಮರ್ಥ್ಯ ಪ್ರದರ್ಶನ ನಡೆಸಲಿದೆ. ಏರೋ ಇಂಡಿಯಾವೂ ಭಾರತದ ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿ ಬಲವಾದ ಬೆಳವಣಿಗೆಯನ್ನು ತೋರಿಸುತ್ತಿದೆ. ಇದರ ಪ್ರಮುಖ ಉದ್ದೇಶಗಳಲ್ಲಿ ಒಂದು ರಕ್ಷಣಾ ಸಹಯೋಗ, ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ಬಲಗೊಳಿಸುವುದು ಇದರ ಪ್ರಮುಖ ಧ್ಯೇಯವಾಗಿದೆ. ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿನ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಜೊತೆಗೆ ಲಕ್ಷಾಂತರ ಅವಕಾಶಗಳಿಗೆ ಇದು ವೇದಿಕೆಯಾಗಲಿದೆ. ಭಾರತವೂ ತಾಂತ್ರಿಕ ಸುಧಾರಣೆ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಜಾಗತಿಕ ಪ್ರಾಬಲ್ಯ ಸಾಧಿಸುತ್ತ ಬದ್ಧತೆ ಹೊಂದಿದೆ. ವಿದೇಶಗಳೊಂದಿಗೆ ನಮ್ಮ ಸಂಬಂಧವು ಪರಸ್ಪರ ಪ್ರಯೋಜನ ಮತ್ತು ಶಾಂತಿಯ ಭರವಸೆಯೊಂದಿಗೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಎರಡು ವರ್ಷಕ್ಕೆ ಒಮ್ಮೆ ನಡೆಯುವ ಏರೋ ಇಂಡಿಯಾ ಪ್ರದರ್ಶನವೂ ನಿರ್ಣಾಯಕ ಸಹಯೋಗಗಳಿಗೆ ದಾರಿ ಮಾಡಿಕೊಡುತ್ತದೆ. ರಾಷ್ಟ್ರದ ವೇಗದ ಅಭಿವೃದ್ಧಿಯೊಂದಿಗೆ ಹೊಂದಿಕೊಳ್ಳುವ ದೃಢವಾದ ರಕ್ಷಣಾ ಪರಿಸರ ವ್ಯವಸ್ಥೆಯೊಂದಿಗೆ ಭಾರತದ ಪರಿವರ್ತನೆಯ ಹಂತಕ್ಕೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದರು.