ಬೆಂಗಳೂರು : ವಾಟ್ಸಾಪ್, ಇನ್ಸ್ಟಾಗ್ರಾಮ್, ಸೇರಿದಂತೆ ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆ ವಹಿಸಬೇಕೆಂದು ಪೋಲಿಸ್ ಇಲಾಖೆ ತಿಳಿಸಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಅವಹೇಳನಕಾರಿ, ಸಾರ್ವಜನಿಕ ಶಾಂತಿಭಂಗ ಉಂಟು ಮಾಡುವ ಹಾಗೂ ಕಾನೂನು ಸುವ್ಯವಸ್ಥೆ ದಕ್ಕೆ ತರುವಂತಹ ಪೋಸ್ಟ್ಗಳನ್ನು ಹಾಕಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ರಾಜ್ಯದ ಎಲ್ಲಾ ಸಮಾಜಿಕ ಜಾಲತಾಣ ಬಳಕೆದಾರರಿಗೆ. ಪೊಲೀಸ್ ಇಲಾಖೆಯ ಅಧಿಕೃತ ಎಕ್ಸ್ ಖಾತೆಯ ಮೂಲಕ ಎಚ್ಚರಿಸಿದೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕುವ ಮುನ್ನ ಎಚ್ಚರಿಕೆಯಿಂದ ಇರಿ ಯಾವುದೇ. ಜಾತಿ,ಧರ್ಮ, ಸಂಘ, ಸಂಘಟನೆಗಳು, ಭಾವನಾತ್ಮಕವಾಗಿ ಕೆರಳಿಸುವ, ರಾಜಕೀಯ ವಿಚಾರಗಳು ಹಾಗೂ ವೈಯಕ್ತಿಕವಾಗಿ ವ್ಯಕ್ತಿಯ ಬಗ್ಗೆ ಹಾಗೂ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುವ ಪೋಸ್ಟ್ ಹಾಕಿದರೆ ಬಿ ಏನ್ ಎಸ್ ಮತ್ತು ತಂತ್ರಜ್ಞಾನ ಕಾಯ್ದೆ(IT ACT) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಇದು ಮುನ್ನೆಚ್ಚರಿಕೆ ಎಂದು ತಿಳಿಸಿದೆ.










