ಕರ್ನಾಟಕ ಧ್ವನಿ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾಗಿ ಜಯಕುಮಾರ್ ಹಳಸೆ

ಮೂಡಿಗೆರೆ: ಸತ್ಯ, ನ್ಯಾಯ ಹಾಗೂ ಜನಪರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಧ್ವನಿ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾಗಿ ಹಳಸೆ ಗ್ರಾಮದ ಜಯಕುಮಾರ್ ಹಳಸೆ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ ಬಳಿಕ ಮಾತನಾಡಿದ ಜಯಕುಮಾರ್ ಹಳಸೆ, 2013ರಲ್ಲಿ ಕೆಸವಳಲು ರಾಘವೇಂದ್ರ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕರ್ನಾಟಕ ಧ್ವನಿ ಸಂಘವು ಹಲವು ವರ್ಷಗಳಿಂದ ಜನಪರ ಹೋರಾಟಗಳು ಹಾಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅವುಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಮೂಲಕ ಪತ್ರಕರ್ತರಾದ ಹೊರಟ್ಟಿ ರಘು, ಬ್ರಿಜೇಶ್ ಕಡಿದಾಳ್, ಸಂಜಯ್, ನಯನ್ ತಳವಾರ, ಸಂದೀಪ್ ದಾರದಹಳ್ಳಿ, ಸುನಿಲ್ ಮಣ್ಣಿಕೆರೆ, ಸಾಯಿ ಮಹೇಶ್ ಸೇರಿದಂತೆ ಹಲವರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ‘ಕರ್ನಾಟಕ ಧ್ವನಿ ಎಂದರೆ ಧೈರ್ಯ’ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಹೇಳಿದರು.
ಹಿಂದಿನ ತಂಡ ಕೈಗೊಂಡ ಜನಪರ ಕಾರ್ಯಗಳನ್ನು ಮುಂದುವರಿಸಿಕೊಂಡು, ನೂತನ ತಂಡವೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ಜಯಕುಮಾರ್ ಹಳಸೆ ತಿಳಿಸಿದರು.

ನೂತನ ಪದಾಧಿಕಾರಿಗಳು
- ತಾಲ್ಲೂಕು ಅಧ್ಯಕ್ಷರು: ಜಯಕುಮಾರ್ ಹಳಸೆ
- ಉಪಾಧ್ಯಕ್ಷರು: ನೂತನ್ ಬೆಟ್ಟಗೆರೆ
- ಪ್ರಧಾನ ಕಾರ್ಯದರ್ಶಿ: ಪುನೀತ್ ಕಡಿದಾಳ್
- ಖಜಾಂಚಿ: ಸಾರ್ಥಕ್ ಮುತ್ತಿಗೆಪುರ
- ಪಟ್ಟಣ ಅಧ್ಯಕ್ಷರು: ಮನೋಜ್
- ಪಟ್ಟಣ ಕಾರ್ಯದರ್ಶಿ: ಪುನೀತ್ ಕುಮಾರ್
- ಜಿಲ್ಲಾ ಸಂಘಟನಾ ಕಾರ್ಯದರ್ಶಿ: ಅಕ್ಷತ್ ಪಟ್ಟದೂರು
- ಗೋಣಿಬೀಡು ಹೋಬಳಿ ಅಧ್ಯಕ್ಷರು: ಅಭಿ, ಹಡ್ಲಗದ್ದೆ
- ಬಣಕಲ್ ಹೋಬಳಿ ಅಧ್ಯಕ್ಷರು: ನವೀನ್
ಸಂಘದ ನಿರ್ದೇಶಕರಾದ ಸುಂದರೇಶ್ ಕೆಸವಳಲು, ಸಂಜಯ್ ಕೊಟ್ಟಿಗೆಹಾರ, ಹೊರಟಿ ಸಂದೇಶ್, ಲಿಂಗೇಶ್, ಬಕ್ಕಿ ಪ್ರಸಾದ್, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.










