ಅರಣ್ಯದಲ್ಲಿರಬೇಕಾದ ರಾಷ್ಟ್ರ ಪಕ್ಷಿ ನವಿಲು ನಾಡನ್ನೇ ಮನೆ ಮಾಡಿಕೊಂಡಿದೆ…

927

ಚಿಕ್ಕಮಗಳೂರು: ಅರಣ್ಯದಲ್ಲಿರಬೇಕಾದ ರಾಷ್ಟ್ರ ಪಕ್ಷಿ ನವಿಲು ನಾಡನ್ನೇ ಮನೆ ಮಾಡಿಕೊಂಡು ಸ್ವಚ್ಚಂದವಾಗಿ ಆಟವಾಡಿಕೊಂಡಿದ್ದು, ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನವಿಲು ಆಗಾಗ್ಗೆ ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೆ ರಂಜಿಸುತ್ತಿದ್ದು ಗ್ರಾಮದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕಳೆದ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಎಂಬುವರು ಕಾಡಿನಲ್ಲಿ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿಯ ಮೊಟ್ಟೆಯ ಜೊತೆ ನವಿಲಿನ ಮೊಟ್ಟೆ ಇಟ್ಟಿದ್ದರು. ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು. ನಂತರ ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ. ನವಿಲು ನಾಟ್ಯವಾಡುತ್ತಿದ್ದರೆ ಇಡೀ ಗ್ರಾಮದ ಜನ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡ್ತಿದ್ದಾರೆ. ಹಲವು ಬಾರಿ ಸೋಮಶೇಖರ್ ನವಿಲನ್ನ ಕಾಡಿಗೆ ಬಿಟ್ಟು ಬಂದ್ರು ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ಬರ್ತಿರೋದು ಗ್ರಾಮಸ್ಥರಲ್ಲಿ ಆಶ್ಚರ್ಯ ತಂದಿದೆ.