ಮೂಡಿಗೆರೆ: ತಾಲೂಕಿನ ಕುದುರೆಮುಖ ಘಾಟಿಯ ತಿರುವಿನಲ್ಲಿ ಐರಾವತ ಬಸ್ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಿರಾಡಿ, ಚಾರ್ಮಾಡಿ ಘಾಟ್ ನಲ್ಲಿ ಬಾರೀ ಗಾತ್ರದ ವಾಹನಗಳ ಸಂಚಾರ ನಿಷೇಧ ಹಿನ್ನಲೆ ಕುದುರೆಮುಖ ಘಾಟ್ ನಲ್ಲಿ ದಿನನಿತ್ಯ ಸಂಚಾರ ಮಾಡುತ್ತಿರುವ ಸಾವಿರಾರು ಬಾರೀ ಗಾತ್ರದ ವಾಹನಗಳು ಈ ಮಾರ್ಗವಾಗಿ ಸಂಚಾರಿಸುತ್ತಿದ್ದು, ಘಾಟಿಯ ತಿರುವಿನಲ್ಲಿ ಸಿಕ್ಕಿ ಹಾಕಿಕೊಂಡ ಐರಾವತ ಬಸ್ ಪರಿಣಾಮವಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಬೆಂಗಳೂರು ಮಂಗಳೂರು ತೆರಳುವ ವಾಹನ ಸವಾರರು ಪರದಾಡುವಂತಾಗಿದ್ದು, ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









