ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಳಲೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭಾಗವಹಿಸಿದ್ದು, ಸುಗ್ಗಿ ಕುಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದ್ದು, ನಾದ ಸ್ವರಕ್ಕೆ ತಕ್ಕಂತೆ ಮೈ ಮರೆತು ನೃತ್ಯ ಮಾಡಿ ಜನರಿಗೆ ಮನರಂಜನೆ ನೀಡಿದ್ದು, ಈ ಮೂಲಕ ಎಲ್ಲರನ್ನೂ ಶಾಸಕರು ಹುರಿದುಂಬಿಸಿದರು. ಶಾಸಕರ ಕುಣಿತಕ್ಕೆ ಆಯೋಜಕರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವಕರು ಸಾಥ್ ನೀಡಿದ್ದಾರೆ.









