ರಾಗಿಯಲ್ಲಿ ಮೂಡಿಬಂದ ಪರಿಸರಸ್ನೇಹಿ ಗಣಪ…

376

ಚಿಕ್ಕಮಗಳೂರು: ಪ್ಲಾಸ್ಟ್ರ ಆಫ್ ಫ್ಯಾರಿಸ್ ಹಾಗೂ ರಾಸಾಯನಿಕ ಬಳಕೆಯಿಂದ ತಯಾರಾದ ಗಣೇಶನಿಂದ ನೀರು ವಿಷಪೂರಿತವಾಗೋದ್ರ ಜೊತೆ ಜಲಚರಗಳಿಗೂ ತೊಂದರೆ ಎಂದು ಮಲೆನಾಡಿನ ಭಕ್ತರೊಬ್ಬರು ರಾಗಿಯನ್ನೇ ಬಳಸಿ ಪರಿಸರ ಸ್ನೇಹಿಯಾದ ರಾಗಿ ಗಣೇಶನ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ವೀರಭದ್ರೇಶ್ವರ ನಗರದ ನಿವಾಸಿಯಾದ ವೇದರಾಜ್ ಭಂಡಾರಿ ಮನೆಯಲ್ಲಿನ ಪೇಪರ್, ಮೈದಾಹಿಟ್ಟು ಹಾಗೂ ರಾಗಿ ಕಾಳಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನ ತಮ್ಮ ಮನೆಯಲ್ಲಿ ಕೂರಿಸಿದ್ದಾರೆ. ಪ್ರತಿವರ್ಷ ಒಂದೊಂದು ರೀತಿಯ ಪರಿಸರ ಸ್ನೇಹಿ ಗಣೇಶನನ್ನ ತಯಾರಿಸೋ ವೇದರಾಜ್ ಅವರು ಕಳೆದ ಬಾರಿ ಬಿಟ್ರೋಟ್ ಗಣೇಶನನ್ನ ತಯಾರಿಸಿದ್ರು, ಹೀಗೆ ಪ್ರತಿವರ್ಷವೂ ಕೊಬ್ಬರಿ ಬೆಲ್ಲ, ಪೇಪರ್ ಗಣೇಶ ಸೇರಿದಂತೆ ಒಂದೊಂದು ವಿನೂತನ ರೀತಿಯಲ್ಲಿ ಗಣೇಶನನ್ನ ನಿರ್ಮಿಸಿ ಪೂಜೆಸುತ್ತಾ ಬಂದಿದ್ದಾರೆ. ಇವರನ್ನ ನೋಡಿದ ಮೇಲೆ‌ ಮಲೆನಾಡಿನ ಬಹುತೇಕ ಮಂದಿ ಈ ರೀತಿಯ ವಿಭಿನ್ನ ಹಾಗೂ ಪರಿಸರಕ್ಕೆ ಮಾರಕವಾಗದ ಗಣೇಶನನ್ನ ಕೂರಿಸಲು ಮುಂದಾಗಿದ್ದಾರೆ.