ನವದಂಪತಿಗೆ ಸ್ನೇಹಿತರಿಂದ ‘ಪೆಟ್ರೋಲ್’ ಗಿಫ್ಟ್…

595
firstsuddi

ಚೆನ್ನೈ: ಮದುವೆಯಾದ ದಂಪತಿಗೆ ಸ್ನೇಹಿತರು ಉಡುಗೊರೆಯಾಗಿ ವಿವಿಧ ರೀತಿಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ತಮಿಳುನಾಡಿನ ಕಡಲೂರು ಜಿಲ್ಲೆಯ ಕುಮರಚಿಯಲ್ಲಿ ನವದಂಪತಿಗೆ ಪೆಟ್ರೋಲ್ ಉಡುಗೊರೆಯಾಗಿ ನೀಡಿದ್ದಾರೆ.ಎಲ್ಲೆಂಜಿಯನ್ ಮತ್ತು ಕಣಿಮೊಝಿ ಇವರು ಭಾನುವಾರ ಜಿಲ್ಲೆಯ ಕುಮರಚಿಯಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಆಗಮಿಸಿದ್ದ ವರನ ಗೆಳೆಯರು 5 ಲೀಟರ್ ಪೆಟ್ರೋಲ್ ದಂಪತಿಗೆ ಉಡುಗೊರೆಯಾಗಿ ನೀಡಿ ಶುಭಾಶಯವನ್ನು ಕೋರಿದ್ದಾರೆ. ವರನಿಗೆ ಉಡುಗೊರೆಯಾಗಿ ಪೆಟ್ರೋಲ್ ನೀಡುವ ಮೂಲಕ ನೆರೆದವರಲ್ಲಿ ನಗು, ಮತ್ತು ಅಚ್ಚರಿ ತರಿಸಿದ್ದಾರೆ. ಮದುವೆಗೆ ದುಬಾರಿ ಉಡುಗೊರೆಗಳನ್ನು ಕೊಡುವುದು ಸರ್ವೇ ಸಾಮಾನ್ಯ, ಆದರೆ ಈಗ ಪೆಟ್ರೋಲ್ ಬೆಲೆಯೂ ಅಷ್ಟೇ ದುಬಾರಿ ಆಗಿರುವುದರಿಂದ ಅದನ್ನೇ ಉಡುಗೊರೆಯಾಗಿ ನೀಡಿದ್ದೇವೆ ಎಂದು ಸ್ನೇಹಿತರು ವರನ ತಿಳಿಸಿದ್ದಾರೆ.