ನವದೆಹಲಿ: ಹವಾಮಾನ ವೈಪರೀತ್ಯ, ಇಂಧನ ಕೊರತೆ, ಸಮಸ್ಯೆಗಳ ಮಧ್ಯೆಯೂ ಏರ್ ಇಂಡಿಯಾ ಪೈಲಟ್ 370 ಜನ ಪ್ರಯಾಣಿಕರ ಪ್ರಾಣ ರಕ್ಷಿಸಿದ್ದಾರೆ. ಸೆಪ್ಟೆಂಬರ್ 11ರಂದು ಏರ್ ಇಂಡಿಯಾದ AI-101 ವಿಮಾನ ದೆಹಲಿಯಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ವೇಳೆ ವಿಮಾನದಲ್ಲಿ ಇಂಧನ ಕೊರತೆ ಎದುರಾಗಿದ್ದು, ಜೊತೆಗೆ ತಾಂತ್ರಿಕ ತೊಂದರೆ ಸಹ ಕಾಣಿಸಿಕೊಂಡಿದ್ದು,ಈ ವಿಮಾನದಲ್ಲಿ 370 ಜನ ಪ್ರಯಾಣಿಕರಿದ್ದು, ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಪೈಲಟ್ ಸಮಯ ಪ್ರಜ್ಞೆ ಮೆರೆದು ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಬದಲು ನೆವಾರ್ಕ್ ಏರ್ಪೋರ್ಟ್ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.










