ಬಿಜೆಪಿಯ ಕೆಲವು ಮುಖಂಡರು ಬಿಜೆಪಿಗೆ ಬರುವಂತೆ ಆಫರ್ ಇಟಿದ್ರು.-ಟಿ.ಡಿ ರಾಜೇಗೌಡ…

749

ಚಿಕ್ಕಮಗಳೂರು : ರಾಜ್ಯದಲ್ಲಿ ಅಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರು ನನಗೆ ಕೆಲವು ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಕೇಳಿದ್ರು, ಅದನ್ನ ನಾನು ತಿರಸ್ಕಾರ ಮಾಡಿದ್ದೇನೆ.ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ.ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಮ್ಮ ನಾಯಕರು.ನಾನು ತತ್ವ ಸಿದ್ದಾಂತಗಳ ಮೇಲೆ ರಾಜಕೀಯಕ್ಕೆ ಬಂದವನು.ಶಿವಮೊಗ್ಗ ಹಾಗೂ ಸಕಲೇಶಪುರದ ಬಿಜೆಪಿಯ ಕೆಲವು ಮುಖಂಡರು ಬಿಜೆಪಿ ಬರುವಂತೆ ಆಫರ್ ಇಟಿದ್ರು.ಬಾರಿ ಮೊತ್ತದ ಹಣ ಹಾಗೂ ಸಚಿವ ಸ್ಥಾನ ನೀಡೋದಾಗಿ ಆಫರ್ ನೀಡಿದ್ದರು.ಬಿಜೆಪಿ ಆಪರೇಷನ್ ಕಮಲಕ್ಕೆ ನೀಡುವ ಹಣ ಭಷ್ಟಾಚಾರದ್ದು, ಬಿಜೆಪಿಯವರು ನನ್ನನ್ನು ಕೂಡ ಅಪರೇಷನ್ ಕಮಲಕ್ಕೆ ಒಳಪಡಿಸುವ ಪ್ರಯತ್ನ ಮಾಡಿದ್ರು, ಚುನಾವಣೆಯ ನಂತರ ಹಾಗೂ ಇತ್ತೀಚಿಗೆ ನನ್ನ ಮೇಲೆ ಆಪರೇಷನ್ ಕಮಲ ನಡೆಸುವ ಪ್ರಯತ್ನ ನಡೆದಿದೆ.ಪ್ರಾಮಾಣಿಕರು ಎನ್ನುವ ಬಿಜೆಪಿಯವರು ಬೃಹತ್ ಮಟ್ಟದ ಆಮಿಷವನ್ನು ನನಗೆ ಒಡ್ಡಿದ್ದರು.ಯಾವ ಸ್ಥಾನಮಾನ ನೀಡಿದ್ರು ಆಪರೇಷನ್ ಕಮಲಕ್ಕೆ ನಾನು ಒಳಗಾಗುವುದಿಲ್ಲ ನಾನು ಕಾಂಗ್ರೆಸ್ ಪಕ್ಷ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.