ವೇಶ್ಯಾವಾಟಿಕೆ  ಗಿರಾಕಿಗಳ ವಿರುದ್ಧ ಕೇಸ್​​ ಹಾಕುವಂತಿಲ್ಲ ಎಂದು ನ್ಯಾಯಮೂರ್ತಿ ಕೆ.ಎನ್​​ ಪನೀಂದ್ರ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ಆದೇಶ.

775
firstsuddi

ಬೆಂಗಳೂರು: ವೇಶ್ಯೆಯರ ಬಳಿಗೆ ತೆರಳುವ ಗಿರಾಕಿಗಳ ವಿರುದ್ಧ ದೂರು ದಾಖಲಿಸಲು ಕಾನೂನಿನಲ್ಲಿ ಯಾವುದೇ ರೀತಿಯ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಕೆ.ಎನ್​​ ಪನೀಂದ್ರ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ಪಡೆ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿತ್ತು.ಇದೇ ವೇಳೆ ದಾಳಿಯಲ್ಲಿ ಸಿಕ್ಕವರ ಮೇಲೆ ಅನೈತಿಕ ವ್ಯವಹಾರ ನಿಷೇಧ ಕಾಯ್ದೆ-1956ರ ಸೆಕ್ಷನ್‌ 3, 4, 5, 6, 7 ಮತ್ತು ಐಪಿಸಿ ಸೆಕ್ಷನ್‌ 370 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಕೇಸ್​​ ವಿಚಾರಣೆ ನಡೆಸಿದ ಕೋರ್ಟ್​, ಗಿರಾಕಿಗಳ ವಿರುದ್ಧ ಯಾವುದೇ ರೀತಿ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ.ಪೊಲೀಸರು ದಾಖಲಿಸಿದ ದೂರು ರದ್ದುಪಡಿಸಿ ಆದೇಶ ಹೊರಡಿಸಿದೆ. ಅರ್ಜಿದಾರರು ವೇಶ್ಯಾವಾಟಿಕೆಯ  ಗಿರಾಕಿಗಳ ವಿರುದ್ಧದ ಎಫ್‌ಐಆರ್‌ನಲ್ಲಿ ಯಾವ ಸೆಕ್ಷನ್‌ನ ಆರೋಪಗಳೂ ಇಲ್ಲ ಮತ್ತು ಗಿರಾಕಿಗಳಿಗೆ ಈ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ ಎಂದು ಹೇಳಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರ್ಟ್​ ಆದೇಶಿಸಿದೆ.