ನವದೆಹಲಿ: ತ್ರಿವಳಿ ತಲಾಖ್ ನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಸೆ.19 ರಂದು ಒಪ್ಪಿಗೆ ನೀಡಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ನ್ನು ರದ್ದುಗೊಳಿಸಬೇಕೆಂದು ತೀರ್ಪು ಪ್ರಕಟಿಸಿ, ಕೇಂದ್ರ ಸರ್ಕಾರಕ್ಕೆ ಹೊಸ ಕಾಯ್ದೆ ರೂಪಿಸಲು ಸೂಚನೆ ನೀಡಿತ್ತು. ಸುಪ್ರೀಂ ಆದೇಶದಂತೆ ಕೇಂದ್ರ ಈಗ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಕೇಂದ್ರ ಸಂಪುಟದಿಂದ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಆದರೆ ಇಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರವೇ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಸಂಪುಟ ಸಭೆ ಅಸ್ತು ಎಂದಿದೆ.










