ಹಾಸನ : ಮನೆಯಲ್ಲಿ ಮಲಗಿದ್ದ ಯುವಕನೊಬ್ಬನನ್ನು ಹೊರಕ್ಕೆ ಎಳೆದು ತಂದು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಬಂಬೂ ಬಜಾರ್ ಪ್ರದೇಶದಲ್ಲಿ ನಡೆದಿದೆ.ಬಂಬೂ ಬಜಾರ್ ನಿವಾಸಿಯಾದ ಕಿರಣ್ (35) ಕೊಲೆಯಾದ ಯುವಕ. ಮಂಗಳವಾರ ಮಧ್ಯಾಹ್ನ ಕ್ಷುಲ್ಲಕ ವಿಚಾರಕ್ಕೆ ಕಿರಣ್ ಸ್ಥಳೀಯರೊಂದಿಗೆ ಜಗಳವಾಡಿಕೊಂಡಿದ್ದನು.ಇದೇ ವಿಚಾರಕ್ಕೆ ಕೋಪಗೊಂಡ ಹಂತಕರು ತಡರಾತ್ರಿ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಕಿರಣ್ ಮೇಲೆ ಎರಗಿ ಮನಬಂದಂತೆ ಹಲ್ಲೆ ನಡೆಸಿ ಬರ್ಬರ ಹತ್ಯೆ ಮಾಡಿದ್ದಾರೆ.ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










