ಹಾಸನ : ದೇವೇಗೌಡರ ಕುಟುಂಬ ಸರ್ಕಾರಿ ಆಸ್ತಿಯನ್ನು ಕಬಳಿಸಿದೆ ಎಂಬ ಎ.ಮಂಜು ಆರೋಪಕ್ಕೆ ಪ್ರತಿಕ್ರಯಿಸಿದ ಸಚಿವ ಹೆಚ್.ಡಿ ರೇವಣ್ಣ ಅವರು ಮಾಜಿ ಸಚಿವ ಎ.ಮಂಜು ಅವರಿಗೆ ಈಗ ಬಿಡುವಿದೆ, ಏನಾದರೂ ಮಾಡಬೇಕಲ್ಲ ಹಾಗಾಗಿ ನಮ್ಮ ಕುಟುಂಬದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಡಿಯೂರಪ್ಪನವರು ನಮ್ಮ ಕುಟುಂಬ ಭೂಮಿ ಕಬಳಿಸಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ,ನಾವು ಸರ್ಕಾರಿ ಭೂಮಿ ಕಬಳಿಸಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವ ರೀತಿಯ ತನಿಖೆಗೂ ಸಿದ್ದರಿದ್ದೇವೆ. ಆಧಾರ ರಹಿತ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಹೊರಟರೆ ನಾವು ಪೊಳ್ಳೆದ್ದು ಹೋಗುತ್ತೇವೆ ಎಂದಿದ್ದಾರೆ.










