ಕೊಪ್ಪ:ತಾಲೂಕಿನ ಅಗಲಗಂಡಿ ಗ್ರಾಮದಲ್ಲಿ ಶಂಕರ್ (32) ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದ್ದು, ಶಂಕರ್ ಇಂದು ಬೆಳಿಗ್ಗೆ 6 ಗಂಟೆಗೆ ತೋಟದ ಬಳಿ ನಡೆದುಕೊಂಡು ಹೋಗುವಾಗ ಕೋವಿಯಿಂದ ಯಾರೋ ಗುಂಡು ಹಾರಿಸಿದ್ದು, ಸೊಂಟದ ಭಾಗಕ್ಕೆ ಗುಂಡು ತಗುಲಿದ್ದು, ಶಂಕರ್ ನನ್ನು ಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಕೋವಿಯಿಂದ ಗುಂಡು ಹಾರಿಸಿದ್ದು ಯಾರು ಅನ್ನೋದು ತಿಳಿದುಬಂದಿಲ್ಲ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.










