ಭೀಮಾನದಿಯ ಬ್ರಿಡ್ಜ್ ಕೆಳಗೆ ನವಜಾತ ಶಿಶು ಪತ್ತೆ…

732
firstsuddi

ಯಾದಗಿರಿ :ಒಂದು ದಿನದ ನವಜಾತ ಶಿಶುವನ್ನು ಬ್ರಿಡ್ಜ್ ಕೆಳಗೆ ಬಿಸಾಕಿ ಹೋಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ನಗರದ ಭೀಮಾನದಿ ಪಕ್ಕದಲ್ಲಿ ಪತ್ತೆಯಾದ ಒಂದು ದಿನದ ಗಂಡು ಶಿಶು ಇದಾಗಿದ್ದು, ಮಗು ಬೇಡವಾದ ಹಿನ್ನೆಲೆಯಲ್ಲಿ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದ್ದು, ಸ್ಥಳೀಯರು ನದಿಯ ಕಡೆ ತೆರಳುತ್ತಿದ್ದ ವೇಳೆ ನವಜಾತ ಶಿಶು ಕಂಡುಬಂದಿದ್ದು, ಕೂಡಲೇ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗುವನ್ನು ಕಲಬುರಗಿ ಶಿಶು ಅಮೂಲ್ಯ ಕೇಂದ್ರಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.