ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಶೃಂಗೇರಿ ದೇವಾಲಯಕ್ಕೆ ಆಗಮಿಸಿದ್ದು,ಶೃಂಗೇರಿ ಶಾರದಾಂಬೆಗೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ್ದು, ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ, ಮುಖ್ಯಮಂತ್ರಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ. ಪೂಜೆ ಬಳಿಕ ಗಣಪತಿ ಹೋಮದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಶೃಂಗೇರಿ ದೇವಾಲಯದ ಚಂದ್ರಶೇಖರ ಸಭಾಂಗಣದಲ್ಲಿ ಸಿದ್ಧತೆ ನಡೆಸಲಾಗಿದೆ. ಹೆಚ್ ಡಿ ರೇವಣ್ಣ ಕೂಡ ಶೃಂಗೇರಿಗೆ ಆಗಮಿಸಿದ್ದಾರೆ.










