ಗದಗ: ಅಂತರ್ಜಾತಿ ವಿವಾಹವಾಗಿ ಮನೆ ತೊರೆದು 13 ವರ್ಷದ ಬಳಿಕ ತವರು ಮನೆಗೆ ಬಂದ ಅಕ್ಕ ಭಾವನನ್ನು ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಮುಳಗುಂದ ಸಮೀಪದ ಬಸಾಪುರ ಗ್ರಾಮದಲ್ಲಿ ನಡೆದಿದೆ. ಆಶೀಫ್ ಅಲಿ ದೊಡ್ಡಮನಿ(45) ಮತ್ತು ಸೋವವ್ವ ಆಡಿನ(32) ಮೃತರು. ಕಳೆದ 13 ವರ್ಷದ ಹಿಂದೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 13 ವರ್ಷದ ನಂತರ ತವರಿಗೆ ಬಂದಿದ್ದರು. ಇವರು ಮನೆಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ಸೋಮವ್ವನ ತಮ್ಮ ದೇವಪ್ಪ ನಡು ಬೀದಿಯಲ್ಲಿ ಇವರಿಬ್ಬರಿಗೂ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.










