ಕಳಸ:ನಾವು ಮಾಡುವ ಸಾಮಾಜಿಕ ಕಾರ್ಯಕ್ರಮಗಳು ಜನ ಸಾಮಾನ್ಯರ ಮನಸ್ಸಿನಲ್ಲಿ ಉಳಿಯುವಂತಾಗಬೇಕು ಎಂದು ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾದ ಸೋಮವಾರ ಪೇಟೆ ಎ.ಆರ್.ಮಮತಾ ಹೇಳಿದರು.ಪಟ್ಟಣದ ದುರ್ಗಾ ಮಂಟಪದಲ್ಲಿ ಕಳಸ ಜೆಸಿಐ ಸಂಸ್ಥೆ ಆಯೋಜಿಸಿದ್ದ ಜೆಸಿ ಸಮ್ಮಿಲನ 2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಜೀವನದುದ್ದಕ್ಕೂ ಈ ಸಮಾಜದಿಂದ ಅದೆಷ್ಟೋ ಪಡೆದುಕೊಂಡಿದ್ದೇವೆ ಅದನ್ನು ಜೆಸಿಐ ಯಂತಹ ಸಂಸ್ಥೆಯ ಮುಖಾಂತರ ಸಾಮಾಜಮಖಿ ಕಾರ್ಯಕ್ರಮಗಳನ್ನು ಮಾಡಿ ತಮ್ಮ ಋಣವನ್ನು ಈ ಸಮಾಜಕ್ಕೆ ತೀರಿಸಿಕೊಳ್ಳಬಹುದು.ಈ ಬಾರಿ ಕಳಸ ಜೆಸಿಐ ಸಂಸ್ಥೆಯು ಕೊಡಗು ನಿರಾಶ್ರಿತರಿಗೆ ದನ ಸಹಾಯ ಆಹಾರ ಸಾಮಾಗ್ರಿಗಳನ್ನು ತಲುಪಿಸಿದೆ.ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಬೇಕಾದ ಸೌಲಭ್ಯಗಳನ್ನು ನೀಡಿದೆ.ವಸತಿ ಶಾಲಗೆ ಸೋಲಾರ್ ಸೌಲಭ್ಯ ನೀಡಿದೆ.ಮಹಾವೀರ ವೃತ್ತದ ಬಳಿ ಸಿಸಿ ಕ್ಯಾಮರ ಅಳವಡಿಸಿದೆ.ಅಲ್ಲದೆ ಈ ಬಾರಿ ತಲಗೋಡು ಗ್ರಾಮದ ಮುಳುಗು ತಜ್ಞ ಭಾಸ್ಕರ್ ಗೆ ಮನೆ ಕಟ್ಟಿಕೊಡುವ ಸಂಕಲ್ಪನ್ನು ಮಾಡಿದೆ ಈ ಕಾರ್ಯಕ್ರಮಗಳು ನಮ್ಮ ಸಂಸ್ಥೆಗೆ ಹೆಮ್ಮೆ ತರಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಂಗಳೂರು ಇದರ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು ಮಾತನಾಡಿ ಜೆಸಿಐಯಲ್ಲಿ ಸಿಗುವ ತರಬೇತಿಗಳು ಮನುಷ್ಯನ ಜೀವನ ಶೈಲಿಯನ್ನೆ ಬದಲಾಯಿಸುತ್ತದೆ.ಈ ತರಬೇತಿಗಳು ಸಮಾಜದ ಒಬ್ಬ ಉತ್ತಮ ನಾಗರೀಕನನ್ನಾಗಿ ಮಾಡುತ್ತದೆ.ತನ್ನ ವ್ಯಕ್ತಿತ್ವದ ವಿಕಸನಕ್ಕಾಗಿ ಜೆಸಿಸಿಐ ಸಂಸ್ಥೆ ಉತ್ತಮ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಳಸ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಿ.ಚಂದ್ರಪ್ಪ ಮಾತನಾಡಿ ಒಬ್ಬ ನಾಯಕನನ್ನಾಗಿ ಮಾಡುವುದೇ ಜೆಸಿ ಸಂಸ್ಥೆ.ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದಲ್ಲದೆ ಸಾಮಾಜಿಕ ಚಟುವಟಿಕೆಗಳಿಗೆ ಅತ್ಯಂತ ಸಹಕಾರಿಯಾಗುತ್ತದೆ.ನನಗೆ ಒಂದು ವರ್ಷ ಸಮಾಜದ ಋಣವನ್ನು ತೀರಿಸಲು ಸಂಸ್ಥೆಯು ಅವಕಾಶ ಮಾಡಿಕೊಟ್ಟಿದೆ.ಅದು ನನಗೆ ತೃಪ್ತಿ ತಂದುಕೊಟ್ಟಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಮತ್ತು ಸಮಾಜ ಸೇವಕ ಕಿರಣ್ ಶೆಟ್ಟಿ,ಸಾಹಿತಿ ಮತ್ತು ಪತ್ರಿಕಾ ವಿತರಕರಾದ ಅ.ರಾ.ರಾಧಕೃಷ್ಣ,ಮುಳುಗು ತಜ್ಞ ಭಾಸ್ಕರ್,ಪತ್ರಕರ್ತ ಸುದೀಶ್ ಸುವರ್ಣ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಳಸ ಹೋಬಳಿ ಕಸಾಪ ಅಧ್ಯಕ್ಷ ನರೇಂದ್ರ ಕಲ್ಲಾನೆ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿರವೀಂದ್ರ,ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಅಧ್ಯಕ್ಷ ಪ್ರಕಾಶ್,ಜೆಸಿಐ ವಲಯ ವಿಶೇಷ ಅಧಿಕಾರಿ ಸಂತೋಷ್,ಕಳಸ ಜೆಸಿಐ ನಿಕಟಪೂರ್ವಧ್ಯಕ್ಷ ಮಹೇಶ್,ಕಾರ್ಯದರ್ಶಿ ರಾಮಪ್ರಕಾಶ್ ಇತರರು ಇದ್ದರು.










