ದೇಹದಲ್ಲಿ ಉಂಟಾಗುವ ಸಣ್ಣ ಪುಟ್ಟ ನೋವುಗಳಿಗೆ ಮಾತ್ರೆ ನುಂಗುವುದಕ್ಕೂಮುನ್ನಾ ಈ ಮಾಹಿತಿಯನ್ನೊಮ್ಮೆ ನೋಡಿ….

1079

ಅತಿಯಾಗಿ ಮಾತ್ರೆಗಳನ್ನ ಸೇವೆನೆ ಮಾಡೋದ್ರಿಂದ ಹಲ್ಲಿನ ದಂತಕ್ಷಯ ಹಾಗೂ ಒಸಡಿನ ಮೇಲೆ ಪರಿಣಾಮವನ್ನುಂಟು ಮಾಡಲಿದೆಯೆಂದು ಅಧ್ಯನಯೊಂದರಿಂದ ತಿಳಿದು ಬಂದಿದೆ. ದೇಹದಲ್ಲಿ ಉಂಟಾಗುವ ಸಣ್ಣ ಪುಟ್ಟ ನೋವುಗಳಿಗೂ ಮಾತ್ರೆ ನುಂಗೋದಕ್ಕೆ ಹೋಗಬೇಡಿ ಅಂತಿದೆ ಆಸ್ಟ್ರೇಲಿಯಾದ ಗ್ರಿಫಿಕ್ ವಿಶ್ವವಿದ್ಯಾಲಯದ ಸಂಶೋಧನೆ. ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ನಡೆಸಿರುವ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದ್ದು, ಅತಿಯಾದ ಮಾತ್ರೆ ಸೇವನೆ ಶರೀರಕ್ಕೆ ಒಳ್ಳೆಯದಲ್ಲ. ಬಾಯಿ ಮೂಲಕವೇ ಎಲ್ಲ ಮಾತ್ರೆ ಹಾಗೂ ಔಷಧಗಳನ್ನ ಸೇವಿಸುತ್ತಿರುವುದರಿಂದ ರಾಸಾಯನಿಕ ಕ್ರಿಯೆ ಜರುಗಿ ವಸಡಿನಲ್ಲಿ ಸವೆತ ಉಂಟಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಕ್ಕಾಗಿಯೇ ವಿಶ್ವದ 28 ಕಡೆಗಳಲ್ಲಿ ಔಷಧಿ ರೂಪದಲ್ಲಿ ಮಾತ್ರೆ ಸೇವಿಸುತ್ತಿರುವ 4086 ಹಲ್ಲಿನ ಸಮಸ್ಯೆಗೆ ಸಂಬಂಧಿಸಿದ ರೋಗಿಗಳನ್ನ ಪರೀಕ್ಷಿಸಿ, ಬಾಯಿ ಹಾಗೂ ಆರೋಗ್ಯ ಸೇರಿದಂತೆ ಇತರೆ ಪರೀಕ್ಷೆಗಳನ್ನೂ ಕೂಡಾ ನಡೆಸಲಾಗಿತ್ತು. ಇದರಿಂದ ಮಾತ್ರೆ ಸೇವನೆ ಮಾಡೋದ್ರಿಂದ ಹಲ್ಲಿನ ದಂತಕ್ಷ ಹಾಗೂ ಒಸಡಿನ ಮೇಲೆ ಪರಿಣಾಮವನ್ನುಂಟು ಮಾಡಲಿದೆ ಎಂದು ಅಧ್ಯಯನದಿಂದ ಹೊರ ಬಿದ್ದಿದೆ.

LEAVE A REPLY

Please enter your comment!
Please enter your name here