ಮೂಡಿಗೆರೆ: 150ನೇ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್ 2ರಂದು ಸ್ವಚ್ಛ ಭಾರತ್ ಮಿಷನ್ ಯೋಜನೆಯ 4ನೇ ವರ್ಷಚಾರಣೆಯ ಹಿನ್ನಲೆಯಲ್ಲಿ “ಸ್ವಚ್ಛತಾ ಹೀ ಸೇವಾ” ಎಂಬ ಹೆಸರಿನಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ಸಂಘ ಸಂಸ್ಥೆಗಳು, ಸ್ಚಚ್ಛತೆ ಕಾರ್ಯ ನಡೆಸಲಿದೆ.ತಾಲೂಕಿನ ಕೊಲ್ಲಿಬೈಲ್ ಗ್ರಾಮದಿಂದ ಚಾರ್ಮಾಡಿ ಘಾಟ್ ವರೆಗೆ ರಸ್ತೆಯ ಬದಿ ಬಿದ್ದಿರುವ ಕಸ,ಪ್ಲಾಸ್ಟಿಕ್ ಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯವನ್ನು ಮಾಡಲಿದ್ದು, 5 ತಂಡಗಳಲ್ಲಿ ಸ್ವಚ್ಛತೆ ಕಾರ್ಯವನ್ನು ನಿರ್ವಹಿಸಲಿದ್ದು, ಮೊದಲನೇ ತಂಡವು ಕೊಲ್ಲಿಬೈಲ್ ನಿಂದ ಹ್ಯಾಂಡ್ ಪೊಸ್ಟ್ ವರೆಗೆ, ಎರಡನೇ ತಂಡವು ಹ್ಯಾಂಡ್ ಪೊಸ್ಟ್ ನಿಂದ ಬಡವನದಿಣ್ಣೆವರೆಗೆ, ಮೂರನೇ ತಂಡವು ಬಡವನದಿಣ್ಣೆ ಯಿಂದ ಚಕ್ ಮಕ್ಕಿ ವರೆಗೆ,ನಾಲ್ಕನೇ ತಂಡವು ಚಕ್ ಮಕ್ಕಿಯಿಂದ ಕೊಟ್ಟಿಗೆಹಾರದ ವರೆಗೆ,ಐದನೇ ತಂಡವು ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ ವರೆಗೂ ಏಕಾಕಾಲದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ ರತನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದು, ತಾಲೂಕಿನ ಎಲ್ಲ ಅಧಿಕಾರಿಗಳು ಹಾಗೂ ನೌಕರರು, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಜೆ.ಸಿ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ನಮ್ಮುಡುಗ್ರು ತಂಡ ಹಾಗೂ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಮನವಿ ಮಾಡಿದ್ದಾರೆ.
Home ಸ್ಥಳಿಯ ಸುದ್ದಿ ನಾಳೆ ಮೂಡಿಗೆರೆಯಲ್ಲಿ 3000ಕ್ಕೂ ಹೆಚ್ಚು ಮಂದಿಯಿಂದ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ…










