ಮೂಡಿಗೆರೆ:ಮಕ್ಕಳಿಗೆ ಯಾವ ಗುಣಮಟ್ಟದ ಮುಖಾಂತರ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನೀಡುತ್ತಾರೋ ಆ ದಿಕ್ಕಿನಲ್ಲಿ ಮಕ್ಕಳ ಬೆಳವಣಿಗೆ ಸಾದ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಹೇಳಿದರು.
ತಾಲೂಕಿನ ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾ ಸಾಂಸ್ಕøತಿಕ,ರಾಷ್ಟ್ರೀಯ ಸೇವಾಯೋಜನೆ,ಯುವ ರೆಡ್ ಕ್ರಾಸ್,ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಕಳಸ ಪ್ರಥಮ ಧರ್ಜೆ ಕಾಲೇಜಿನ ಅಭಿವೃದ್ಧಿ ಮತ್ತು ಮಕ್ಕಳ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ಇರುವುದು ನಮ್ಮ ಊರಿಗೆ ಹೆಮ್ಮೆ ತರಿಸುತ್ತದೆ.ಇದರಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಹೆಚ್ಚಿನ ಪರಿಶ್ರಮ ಇದೆ ಎಂದು ಹೇಳಿದರು.
ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಎನ್.ಎಂ.ಹರ್ಷ ಮತನಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮಾ ಗಾಂಧಿ ಅದೆಷ್ಟೋ ಹೋರಾಟಗಳನ್ನು ಮಾಡಿದ್ದಾರೆ.ಆದರೆ ಇವತ್ತಿನ ಸ್ಥಿತಿಯನ್ನು ನೋಡಿದರೆ ಅದೇ ಹೋರಾಟಗಾರನ ಪರಿಚಯವನ್ನು ಮಾಡುವಂತಾಗಿದೆ.ಗಾಂದಿಯನ್ನೆ ಕೊಂದ ಗೂಡ್ಸೆಯನ್ನು ಪ್ರೀತಿಸುವ ಮಟ್ಟಿಗೆ ಬಂದಿದೆ.ಮನೆಯಲ್ಲಿದ್ದ ತಾಯಿ,ಗುರುಕುಲದಲ್ಲಿದ್ದ ಗುರು,ಸಮಾಜದಲ್ಲಿದ್ದ ಆದರ್ಶ ವ್ಯಕ್ತಿಗಳನ್ನು ಗೌರವಿಸುವ ಸಂಸಂಸ್ಕøತಿ ದೂರವಾಗುತ್ತಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಭಿಮಾನ ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಕೆ.ನಿ.ನರೇಂದ್ರ ಕಲ್ಲಾನೆ ಇವರು ಕಾಲೇಜಿಗೆ ದೇಣಿಗೆಯಾಗಿ ನೀಡಿದ ಭದ್ರತಾ ಗೇಟ್ ನ್ನು ಉದ್ಘಾಟನೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಕಿರಣ್,ಕಾಫಿ ಬೆಳೆಗಾರರಾದ ಕೆ.ವಿ.ನರೇಂದ್ರ ಕಲ್ಲಾನೆ,ಉಮೇಶ್ ಗಾಳಿಗಂಡಿ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭರತ್ರಾಜ್,ಉಪನ್ಯಾಸಕರಾದ ವಿಶುಕುಮಾರ್,ಡಾ.ರಮ್ಯ,ಸುದೀರ್ ಜೈನ್ ಇತರರು ಇದ್ದರು.
Home ಸ್ಥಳಿಯ ಸುದ್ದಿ ಮಕ್ಕಳಿಗೆ ಯಾವ ಗುಣಮಟ್ಟದ ಮುಖಾಂತರ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನೀಡುತ್ತಾರೋ ಆ ದಿಕ್ಕಿನಲ್ಲಿ ಮಕ್ಕಳ...










