ಕಳಸ:ಮದ್ಯರಾತ್ರಿಯ ವೇಳೆ ಐಷಾರಾಮಿ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ಹೋಗುವ ದೃಶ್ಯ ಸಿ.ಸಿ.ಕ್ಯಾಮರದಲ್ಲಿ ಸರೆಯಾಗಿದ್ದು,ಪೊಲೀಸರು ಕೂಡ ಅಸಾಯಕರಾಗುವ ಸನ್ನಿವೇಶ ಕಳಸದಲ್ಲಿ ಉಂಟಾಗಿದೆ.ಭಾನುವಾರದ ತಡರಾತ್ರಿ ಕಳಸದ ಹೊರನಾಡು ರಸ್ತೆಯಲ್ಲಿ ಜೈಲೋ ವಾಹನವನ್ನು ನಿಲ್ಲಿಸಿ ಇಬ್ಬರು ಮುಸುಕು ದಾರಿಗಳು ರಸ್ತೆಯ ಬದಿಯಲ್ಲಿದ್ದ ಎರಡು ದನಗಳನ್ನು ತುಂಬಿಸಿಕೊಳ್ಳುತ್ತಿದ್ದರು.ಇದೇ ಸಂದರ್ಭದಲ್ಲಿ ರಸ್ತೆ ಪಕ್ಕದ ಮನೆಯಲ್ಲಿದ್ದ ವೀರೇಂದ್ರವರಿಗೆ ಎಚ್ಚರವಾಗಿ ಕಿಟಕಿಯ ಮುಖಾಂತರ ನೋಡಿದಾಗ ದನಗಳನ್ನು ವಾಹನಕ್ಕೆ ತುಂಬಿಸಿಕೊಳ್ಳುತ್ತಿರುವುದು ಕಳಡು ಬಂದಿದೆ.ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲದೆ,ತಾನೇ ಸ್ವತಃ ಪೊಲೀಸ್ ಠಾಣೆಗೆ ಹೋಗಿದ್ದಾರೆ.ಕೂಡಲೇ ಪೊಲೀಸ್ ಗನ್ ಹಿಡಿದುಕೊಂಡು ದನ ಕಳ್ಳರ ವಾಹನಕ್ಕೆ ಕಾದು ಕುಳಿತಿದ್ದರು.ಈ ಸಂದರ್ಭದಲ್ಲಿ ವಾಹನವು ಬಂದಾಗ ಪೊಲೀಸರು ಗನ್ ತೋರಿಸಿ ನಿಲ್ಲಿಸಲು ಪ್ರಯತ್ನ ಪಟ್ಟಾಗ ಏಕಾ ಏಕಿ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಬಂದಿದ್ದರು.ಕೂಡಲೇ ತಪ್ಪಿಸಿಕೊಂಡ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದಾರೆ.ಆದರೆ ದನಗಳ್ಳರು ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದಾರೆ.ವಾಹನಕ್ಕೆ ದನಗಳನ್ನು ತುಂಬಿಸಿಕೊಂಡು ಹೋಗುವ ದೃಶ್ಯವಾಳಿಯು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿ ವೈರಲಾಗಿದೆ.ಆದರೆ ದೃಶ್ಯವಾಳಿಯಲ್ಲಿ ವಾಹನದ ನಂ ಹಾಗೂ ಕಳ್ಳರ ದೃಶ್ಯಗಳು ಅಸ್ಪಷ್ಟವಾಗಿ ಗುರುತು ಸಿಗುತ್ತಿಲ್ಲ.
ಈ ಬಾಗದಲ್ಲಿ ಪ್ರತೀ ಬಾರಿಯು ಈ ದಂದೆ ನಡೆಯುತ್ತಿದ್ದು,ರಾತ್ರಿ ಇದ್ದ ದನಗಳು ಬೆಳಿಗ್ಗೆಯಾಗುವ ಹೊತ್ತಲ್ಲಿ ಕಣ್ಮರೆಯಾಗುತ್ತಿವೆ.ಇದರಲ್ಲಿ ಸ್ಥಳಿಯರ ಕೈವಾಡ ಇರುವ ಶಂಕೆ ಇದೆ.ಅಲ್ಲದೆ ಪೊಲೀಸರಿಗೆ ಕೇವಲ ಗನ್ ಹಿಡಿದುಕೊಳ್ಳಲು ಮಾತ್ರ ಸಾದ್ಯ ಹೊರತು ಅದನ್ನು ಪೈರ್ ಮಾಡುವ ಅನುಮತಿಯೂ ಇರುವುದಿಲ್ಲ.ಚಾಲಾಕಿ ಕಳ್ಳರು ಪೊಲೀಸರ ಮೇಲೆ ವಾಹನ ಹತ್ತಿಸಲು ತಯಾರಾಗಿಯೇ ಬಂದಿರುತ್ತಾರೆ.ಈ ಕಳ್ಳತನದಲ್ಲಿ ದೊಡ್ಡ ಜಾಲನೇ ಇರುವ ಬಗ್ಗೆ ಅನುಮಾನಗಳು ಕಂಡು ಬರುತ್ತಿದೆ.ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿಗಳು ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕಳಸ ಗ್ರಾಮಸ್ಥರು ಆಗ್ರಹಿಸಿದ್ದಾರೆ.









