ಮಹಾತ್ಮಾ ಗಾಂಧೀ ಅವರ ತತ್ವ ಮತ್ತು ಆದರ್ಶಗಳು ಅಜರಾಮರ, ಅವರ ಬದುಕೇ ಎಲ್ಲರಿಗೂ ಸಂದೇಶ: ಐ.ಬಿ.ಶಂಕರ್…

337
firstsuddi

ಚಿಕ್ಕಮಗಳೂರು: ಭಾರತ ಸೇವಾದಳದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸಾಮೂಹಿಕ ಶ್ರಮದಾನದೊಂದಿಗೆ ನಗರದ ಸೇವಾದಳ ಕಛೇರಿ ಆವರಣವನ್ನು ಸ್ವಚ್ಚಗೊಳಿಸುವ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನಾಚರಣೆಯನ್ನು ಮಂಗಳವಾರ ಆಚರಿಸಿದರು.ಜಯಂತಿ ಪ್ರಯುಕ್ತ ರಾಷ್ಟ್ರಪಿತ ಮಹಾತ್ಮಾ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮತ್ತು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಐ.ಬಿ.ಶಂಕರ್ ಮಹಾತ್ಮಾ ಗಾಂಧೀ ಅವರ ತತ್ವ ಮತ್ತು ಆದರ್ಶಗಳು ಅಜರಾಮರ, ಅವರ ಬದುಕೇ ಎಲ್ಲರಿಗೂ ಸಂದೇಶ ಮತ್ತು ಪಾಠ, ಲಾಲ್ ಬಹದ್ದೂರ್ ಶಾಸ್ತ್ರೀ ಅವರು ದೇಶ ಕಂಡ ಧೀಮಂತ ನಾಯಕ ಎಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರಪೈ, ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಚಾಲಕ ಚಂದ್ರಕಾಂತ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗಧೀಶ್, ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್, ಉಮಾ ಐ.ಬಿ.ಶಂಕರ್, ರೈತ ಸಂಘದ ಮುಖಂಡ ಗುರುಶಾಂತಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್, ನೆಹರು ಯುವ ಕೇಂದ್ರ ಲೆಕ್ಕಾಧಿಕಾರಿ ಮಂಜುನಾಥ್ ರಾವ್, ಮಹೇಶ್ವರಪ್ಪ, ಶಾಂತಕುಮಾರ್ ಉಪಸ್ಥಿತರಿದ್ದರು.