ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.- ಬಿ.ಎಸ್.ಯಡಿಯೂರಪ್ಪ…

333
firstsuddi

ಶಿವಮೊಗ್ಗ: ಹಳೇ ಜೈಲು ಆವರಣದಲ್ಲಿ ನಡೆಯುತ್ತಿರುವ ದಸರಾ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ಜನರು ಕಟ್ಟುತ್ತಿರುವ ತೆರಿಗೆ ಹಣ ಎಲ್ಲಿ ಹೋಗ್ತಾ ಇದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರಿದಿದ್ದು, ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ರೈತರಿಗೆ ನಿರಂತರ ನೋಟಿಸ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಇತಿಹಾಸದಲ್ಲೇ ಇಂತಹ ಸರ್ಕಾರವನ್ನು ನೋಡಿಲ್ಲ. ಸರ್ಕಾರ ಇದೆಯಾ ಎನ್ನುವುದೇ ಪ್ರಶ್ನೆಯಾಗಿರುವಾಗ ಸಂಪುಟ ವಿಸ್ತರಣೆ ಹೇಗೆ ಸಾಧ್ಯ, ಸಂಪುಟ ವಿಸ್ತರಣೆ ದೂರದ ಮಾತು ಎಂದಿದ್ದಾರೆ.