ಚಾಲಕನ ಜೊತೆ ಸೇರಿ ಬಸ್ ಡ್ರೈವ್ ಮಾಡಿದ ಕೋತಿ…

376
firstsuddi

ದಾವಣಗೆರೆ: ಕೆಎಸ್​ಆರ್​ಟಿಸಿ ಬಸ್ಸನ್ನು ಕೋತಿಯೊಂದು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ಚಾಲಕನನ್ನು ಅಮಾನತು ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅಕ್ಟೋಬರ್ 1 ರಂದು ದಾವಣಗೆರೆ ಭರಮಸಾಗರ ಹಾಗೂ ಆಲ್ಲೆಕಲ್ಲು ಮಾರ್ಗವಾಗಿ ಕೆಎಸ್​ಆರ್​ಟಿಸಿ ಬಸ್ ಸಂಚರಿಸುತ್ತಿತ್ತು ಆ ವೇಳೆ ಕೋತಿ ಸ್ಟೇರಿಂಗ್ ಮೇಲೆ ಕುಳಿತು ಚಾಲಕನೊಂದಿದೆ ಬಸ್ ಚಲಾಯಿಸಿದ್ದು, ಚಾಲಕ ಪ್ರಕಾಶ್ ಅವರು ಗೇರ್ ಹಾಕಿದರೆ, ಕೋತಿ ಸ್ಟೇರಿಂಗ್ ತಿರುಗಿಸುತ್ತಿತ್ತು. ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದರು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಾಲಕ ಪ್ರಕಾಶ್‍ನನ್ನು ಸಾರಿಗೆ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.