ಲೋಕಸಭೆ ಉಪಚುನಾವಣೆ ಬಗ್ಗೆ ಶಾಸಕ ಸಿ.ಟಿ.ರವಿ ಅಸಮಾಧಾನ…

360

ಚಿಕ್ಕಮಗಳೂರು: 3 ತಿಂಗಳಿಗೆ ಲೋಕಸಭೆ ಉಪಚುನಾಚಣೆ ಬೇಕಿತ್ತಾ ಅನ್ನುವ ಪ್ರಶ್ನೆ ನನಗೆ ಮೂಡಿದೆ ಎಂದು ಲೋಕಸಭೆ ಉಪಚುನಾವಣೆ ಬಗ್ಗೆ ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲರಲ್ಲೂ ಲೋಕಸಭೆ ಉಪಚುನಾವಣೆ ಬೇಕಿತ್ತಾ ಅನ್ನುವ ಪ್ರಶ್ನೆ ಮೂಡಿದೆ. ಯಾವ ಪಾರ್ಟಿಯ ಒಳಗೆ ಕೇಳಿದರೆ ಚುನಾವಣೆ ಬೇಡ, ಆದರೆ ಹೊರಗೆ ಚುನಾವಣೆ ಪ್ರತಿಷ್ಠೆ ಇದೆ. ನಾವು ಚುನಾವಣೆ ಎದುರಿಸುತ್ತೇವೆ, ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಐದು ಕ್ಷೇತ್ರದಲ್ಲಿ ಗೆಲ್ಲೋಕೆ ನಮ್ಮ ಪ್ರಯತ್ನ ನಡೆಯುತ್ತಿದೆ. ಯಾವ ಚುನಾವಣೆಯನ್ನು ಕೂಡ ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಈ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಐದಕ್ಕೆ ಐದು ಕ್ಷೇತ್ರದಲ್ಲೂ ಗೆಲ್ಲುವ ಪ್ರಯತ್ನ ನಮ್ಮದು ,ಎಂದಿದ್ದಾರೆ.