15 ಜನ ಸಹಪಾಠಿಗಳು, ಇಬ್ಬರು ಶಿಕ್ಷಕರು, ಪ್ರಾಂಶುಪಾಲರು ಸೇರಿದಂತೆ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

447
firstsuddi

ಫಸ್ಟ್ ಸುದ್ದಿ- ಬಿಹಾರದ ಸರನ್ ಜಿಲ್ಲೆಯಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲೆಯ ಪ್ರಾಂಶುಪಾಲರು ಹಾಗೂ ಇಬ್ಬರು ಶಿಕ್ಷಕರು, 15 ಜನ ಸಹಪಾಠಿಗಳು ಸೇರಿದಂತೆ ಕಳೆದ ಎಂಟು ತಿಂಗಳಿಂದ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದು, 2017ರ ಡಿಸೆಂಬರ್ ನಲ್ಲಿ ತನ್ನ ತಂದೆ ಜೈಲಿಗೆ ಹೋದ ನಂತರ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ. ಜಾಮೀನಿನ ಮೇಲೆ ತಂದೆ ಜೈಲಿನಿಂದ ಹಿಂದಿರುಗಿದ ನಂತರ ಇಡೀ ಘಟನೆಯನ್ನು ತಿಳಿಸಿದ್ದು,2017ರ ಡಿಸೆಂಬರ್ ತಿಂಗಳಿನಲ್ಲಿ ಶಾಲೆಯ ಶೌಚಾಲಯದಲ್ಲಿ ಮೂವರು ಸಹಪಾಠಿಗಳು ತನ್ನ ಮೇಲೆ ಮೊದಲ ಬಾರಿ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಆರೋಪಿಗಳು ನನ್ನ ಮೇಲೆ ಬಲಾತ್ಕಾರ ಮಾಡಿ ಆ ದೃಶ್ಯಗಳನ್ನು ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದು ತಮ್ಮ ಕೃತ್ಯವನ್ನು ಯಾರಿಗಾದರೂ ಹೇಳಿದರೆ ದೃಶ್ಯವನ್ನು ಸಾರ್ಜನಿಕವಾಗಿ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದೇ ವಿಷಯವಾಗಿ ತನ್ನನ್ನು ಬೆದರಿಸಿ ಗ್ಯಾಂಗ್ ರೇಪ್ ಮಾಡಿದರು ಎಂದು ವಿದ್ಯಾರ್ಥಿನಿ ಹೇಳಿದ್ದು ಹಾಗೂ ಕೆಲವು ದಿನಗಳ ನಂತರ ಇತರ ಸಹಪಾಠಿಗಳಿಗೆ ವಿಡಿಯೋ ಶೇರ್ ಮಾಡಿದ್ದು. ನಂತರ ಅವರೂ ಕೂಡ ಅನೇಕ ಸಂದರ್ಭಗಳಲ್ಲಿ ಬ್ಲಾಕ್ ಮೇಲ್ ಮಾಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದರು ಎಂದು ತಿಳಿಸಲಾಗಿದೆ. ಛಾಪ್ರಾದ ಪರ್ಸಾಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.