ಕಾಮುಕನ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ…

264
firstsuddi

ಬೆಂಗಳೂರು: ಮದುವೆಯಾಗಿರುವ ಗೃಹಿಣಿಯೋರ್ವರು ಸೈಕೋ ಕಾಮುಕನೋರ್ವನ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕಾಶ್​ ಅಲಿಯಾಸ್​ ಲಕ್ಕಿ ಎಂಬಾತ ವಿವಾಹವಾಗಿ ನಾಲ್ಕು ವರ್ಷದ ಮಗುವಿದೆ ಎಂದು ತಿಳಿದಿದ್ದರೂ ಮಹಿಳೆಯ ಹಿಂದೆ ಬಿದ್ದ ಕಾಮುಕ  ಮದುವೆಯಾಗುವಂತೆ ದಿನನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನು ತನ್ನ ಪತಿಗೆ ಪತ್ನಿ ತಿಳಿಸಿದ್ದಾರೆ. ಪತಿ ಎರಡು ಬಾರಿ ಕಾಮುಕನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಕಾಮುಕ ತನ್ನ ಚಾಳಿಯನ್ನು ಬಿಡದೆ ಮುಂದುವರೆಸಿದ್ದು, ಅಲ್ಲದೆ ಕಳೆದ ಡಿಸೆಂಬರ್ 11 ರಂದು ಮಹಿಳೆ ರಸ್ತೆಯಲ್ಲಿ ತೆರಳುತ್ತಿದ್ದಾಗ ಕೈ ಹಿಡಿದು ಎಳೆದಾಡಿದ್ದಾನೆ. ಈ ವಿಷಯ ಪತಿಗೆ ತಿಳಿದರೆ ಮನೆಯಿಂದ ಹೊರ ಹಾಕುತ್ತಾರೋ ಎಂದು ಮಹಿಳೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಪ್ರಕಾಶ್​ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.