ಕೋಲಾರ : ಮಗಳನ್ನು ಚುಡಾಯಿಸಿದರ ಬಗ್ಗೆ ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್‍ನ ಮಾರಿಕುಪ್ಪಂ ಬಡಾವಣೆಯಲ್ಲಿ ನಡೆದಿದೆ.ಕುಮಾರ್(48) ಕೊಲೆಯಾದ ದುರ್ದೈವಿ. ಸುರೇಶ್ ಹಾಗೂ ಆಲ್ವಿನ್ ಆರೋಪಿಗಳು ಎಂದು ಗುರುತಿಸಲಾಗಿದ್ದು, ಕುಮಾರ್ ಅವರ ಮಗಳನ್ನು ಸುರೇಶ್ ಹಾಗೂ ಆಲ್ವಿನ್ ಇಬ್ಬರು ಚುಡಾಯಿಸಿದ್ದಾರೆ. ಈ ಬಗ್ಗೆ ಕುಮಾರ್ ಅವರು ಸುರೇಶ್ ಹಾಗೂ ಆಲ್ವಿನ್ ಬಳಿ ಪ್ರಶ್ನಿಸಿದ್ದು, ಕುಪಿತಗೊಂಡ ದುಷ್ಕರ್ಮಿಗಳು ಕುಮಾರ್ ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










