ವಾಕಿಂಗ್ ಗೆ ತೆರಳುತ್ತಿದ್ದವರ ಮೇಲೆ ಕಾರು ಹರಿದು ಓರ್ವನ ಸಾವು, ಇಬ್ಬರ ಸ್ಥಿತಿ ಗಂಭೀರ…  

254
firstsuddi

ಕಲಬುರಗಿ: ವಾಕಿಂಗ್ ಗೆ ತೆರಳುತ್ತಿದ್ದವರ ಮೇಲೆ  ಕಾರು ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಮಮಂದಿರ ಬಳಿ  ನಡೆದಿದೆ. ಕಾರು ಚಾಲಕನಿಗೆ ಪಿಡ್ಸ್ ​​ ಬಂದ ಕಾರಣ  ಚಾಲಕನ ನಿಯಂತ್ರಣ ತಪ್ಪಿ ಕಾರು ವಾಕಿಂಗ್​ ಗೆ ತೆರಳುತ್ತಿದ್ದವರ ಮೇಲೆ ಹರಿದಿದೆ. ಪರಿಣಾಮ  ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು,  ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ  ಆಸ್ಪತೆಗೆ ದಾಖಲಿಸಲಾಗಿದ್ದು,  ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.