ಅಂಬರೀಷ್ ಅಂತಿಮ ದರ್ಶನ ಪಡೆದು ಬಳಿಕ  ಅಭಿಮಾನಿ ಆತ್ಮಹತ್ಯೆ…

244
firstsuddi

ಮಂಡ್ಯ: ನಟ ಅಂಬರೀಶ್ ಅವರ  ಅಂತಿಮ ದರ್ಶನ ಪಡೆದು ಬಳಿಕ  ಅಭಿಮಾನಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸುರೇಂದ್ರ ಜಿ ಎಸ್ ( 46)   ಎಂಬುವವರು ನಿನ್ನೆ ರಾತ್ರಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಷ್ ಅವರ  ಅಂತಿಮ ದರ್ಶನ  ಪಡೆದು ಬಳಿಕ   ಮದ್ದೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ನಟ ಅಂಬರೀಶ್  ಅವರ  ಅಭಿಮಾನಿಯಾಗಿದ್ದ ಸುರೇಂದ್ರ  ಹಲವು ವರ್ಷಗಳ ಹಿಂದೆಯೇ ತನ್ನ ಕೈ ಮೇಲೆ ಅಂಬರೀಷ್ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು ಎನ್ನಲಾಗಿದ್ದು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.