ಅಕ್ಕನಿಗೆ ಬೈದಿದ್ದಕ್ಕೆ ಬಾವನ ಕೈ ಬೆರಳು ಕತ್ತರಿಸಿದ ​​​ಬಾಮೈದ…

445
firstsuddi

ಬೆಂಗಳೂರು: ಅಕ್ಕನನ್ನು ಬೈದಿದಕ್ಕೆ ಬಾಮೈದನೊಬ್ಬ ಭಾವನ ಕೈ ಬೆರಳನ್ನು ಕತ್ತರಿಸಿರುವ ಘಟನೆ ಡಿಜೆ ಹಳ್ಳಿಯಲ್ಲಿ ಜನವರಿ 28 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮ್ಜದ್ ಬಾವನ ಕೈ ಬೆರಳು ಕಟ್ ಮಾಡಿದ ವ್ಯಕ್ತಿ. ಶಫಿ ಹಲ್ಲೆಗೊಳಗಾದ ವ್ಯಕ್ತಿ. ಶಫಿ ​ ಕಾರ್ಪೆಂಟರ್ ವೃತ್ತಿಯನ್ನು ಮಾಡುತ್ತಿದ್ದು, ಕಳೆದ ಒಂದು ವಾರದಿಂದ ಅನಾರೋಗ್ಯ ಕಾರಣದಿಂದ ಕೆಲಸಕ್ಕೆ ತೆರಳದೇ ಮನೆಯಲ್ಲಿ ಇದ್ದಾಗ ತವರು ಮನೆಯಲ್ಲಿದ್ದ ಪತ್ನಿ ಶಫಿಯ ಆರೋಗ್ಯ ವಿಚಾರಿಸಲು ಬಂದಿರಲಿಲ್ಲ ಎಂಬ ವಿಚಾರಕ್ಕೆ ಶಫಿ ಹಾಗೂ ಅವರ ಪತ್ನಿ ನಡುವೆ ಜಗಳವಾಗಿದೆ. ಬಳಿಕ ಸಂಜೆ ಬಾಮೈದ ಅಮ್ಜದ್​ ತನ್ನ ಸಂಬಂಧಿಕರ ಜೊತೆ ಬಂದು ಚಾಕುವಿನಿಂದ ಶಫಿಯ ಎದೆ ಭಾಗಕ್ಕೆ ಚುಚ್ಚಿ, ಬಲಗೈನ ಕೈ ಬೆರಳುಗಳನ್ನ ಕಟ್ ಮಾಡಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಾಯಾಳು ಶಫಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.