ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮಹಿಳೆಯರ ಪ್ರತಿಭಟನೆ…

201
firstsuddi

ಬೆಂಗಳೂರು:  ರಾಜ್ಯಾದ್ಯಂತ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ  ವಿವಿಧ ಜಿಲ್ಲೆಗಳಿಂದ ಸಾವಿರಾರು ಮಹಿಳೆಯರು ಕಳೆದ 12 ದಿನಗಳಿಂದ ಪ್ರತಿಭಟನಾ ಕಾಲ್ನಡಿಗೆ ಮೂಲಕ‌ ಬೆಂಗಳೂರಿಗೆ  ನಿನ್ನೆ ತಲುಪಿದ್ದಾರೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಶಾಮಿಯಾನ ಹಾಕಿ ವಾಸ್ತವ್ಯ ಹೂಡಿದ್ದು, ಇಂದು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸುತ್ತಿದ್ದು, ಬೀದರ್, ಬೆಳಗಾವಿ  ಚಿತ್ರದುರ್ಗ, ಬಾಗಲಕೋಟೆ,  ಸೇರಿದಂತೆ ಹಲವು  ಜಿಲ್ಲೆಗಳಿಂದ ಸುಮಾರು ಎರಡು ಸಾವಿರ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.