ಮೊಬೈಲ್ ಕಳೆದು ಹೋಗಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ ಶರಣು…

844
firstsuddi

ಮೈಸೂರು: ಮೊಬೈಲ್ ಕಳೆದುಹೋದ ಹಿನ್ನಲೆ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಾಂಧೀನಗರದಲ್ಲಿ ನಡೆದಿದೆ. ನಿಖಿತಾ (17) ಮೃತ ವಿದ್ಯಾರ್ಥಿನಿ ಗಾಯತ್ರಿಪುರಂನ ಗಣಪತಿ ಸಚ್ಚಿದಾನಂದ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆ ಮೊಬೈಲ್ ಕಳೆದು ಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಗಾಂಧೀನಗರದ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದ್ದು, ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.