ನಟ ನೀನಾಸಂ ಅಶ್ವಥ್ ವಿರುದ್ಧ ಸ್ನೇಹಿತನಿಂದ  ಆರೋಪ…

297
firstsuddi

ಬೆಂಗಳೂರು:  ನಟ ನೀನಾಸಂ ಅಶ್ವಥ್  ಅವರ ವಿರುದ್ಧ ಗಂಭೀರ ಆರೋಪವೊಂದು  ಕೇಳಿ ಬಂದಿದ್ದು,  ರಜತ್ ಎಂಬ ಸ್ನೇಹಿತನಿಂದ ಅಶ್ವಥ್  ಅವರು  ಹೌಸ್ ಬಿಸಿನೆಸ್ ನಲ್ಲಿ ಪಾಲುದಾರನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ18 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದು, ಈಗ  ಫಾರ್ಮ್ ಹೌಸ್ ಪಾಲುದಾರನಾಗಿ ಮಾಡಿಕೊಳ್ಳದೆ, ಹಣವನ್ನು ವಾಪಸ್ಸು ನೀಡದೆ ಆಟವಾಡಿಸುತ್ತಿದ್ದಾರೆ ಎಂದು  ರಜತ್  ಅವರು ಅಶ್ವಥ್ ವಿರುದ್ಧ ಫಿಲ್ಮ್ ಚೆಂಬರ್ ಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೀನಾಸಂ ಅಶ್ವಥ್ ಅವರು ನಾನು ರಜತ್ ಎಂಬುವವರಿಂದ ಹಣ ಪಡೆದಿದ್ದೆ. ಆದರೆ, ಅದನ್ನು ಹಂತ ಹಂತವಾಗಿ ಮರು ಪಾವತಿ ಮಾಡಿದ್ದೇನೆ ಎಂದಿದ್ದಾರೆ.