ಉಡುಪಿ: ಡ್ರಗ್ಸ್ ಜಾಲದ ವಿರುದ್ದ ತನಿಖೆ ಚುರುಕುಗೊಳಿಸಿರುವ ರಾಜ್ಯ ಪೊಲೀಸರು ಆಂತರಿಕ ಭದ್ರತಾ ವಿಭಾಗದ ಸೂಚನೆಯಂತೆ ಮಣಿಪಾಲ ಪೊಲೀಸರು ಸುಮಾರು ಹದಿನೈದು ಲಕ್ಷ ಮೌಲ್ಯದ ಎಂ.ಡಿ.ಎಂ. ಎ ಮಾತ್ರೆಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಉತ್ತರ ಭಾರತ ಮೂಲದ ಯುವಾಂಶು ಜೋಶಿ(20) ಎಂದು ಗುರುತಿಸಲಾಗಿದೆ. ಈತ ಮಣಿಪಾಲ ಎಂ ಐ ಟಿ ಕಾಲೇಜಿನ ಆರೋಪಿತನ Instrumentation And Control ವಿಭಾಗದ 7 ನೇ ಸೆಮಿಸ್ಟ್ ರ ವಿದ್ಯಾರ್ಥಿ.
ಪ್ರಾಥಮಿಕ ಮೂಲಗಳ ಪ್ರಕಾರ ಮಣಿಪಾಲ ಪೊಲೀಸರು ಬಂಧಿತ ವ್ಯಕ್ತಿಯಿಂದ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಎಂ.ಡಿ.ಎಂ. ಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಉಡುಪಿ ಐಎಸ್ ಡಿ ಘಟಕದ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಮಣಿಪಾಲದ ಶೀಂದ್ರಾ ಬ್ರಿಡ್ಜ್ ಬಳಿ ಮಾದಕ ವಸ್ತು M.D.M.A (ECSTASY) ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಹಿಮಾಂಶು ಜೋಶಿ ಯನ್ನು ಬಂಧಿಸಿ ಆತನಿಂದ ಒಟ್ಟು 498 ನಿಷೇಧಿತ ನಿದ್ರಾಜನಕ M.D.M.A (ECSTASY) ಮಾತ್ರೆ ಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಮಾತ್ರೆಗಳ ಅಂದಾಜು ಮೌಲ್ಯ 14,94,000/- ರೂ.
ಆರೋಪಿಯ Instrumentation And Control ವಿಭಾಗದ 7 ನೇ ಸೆಮಿಸ್ಟ್ ನ ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿ. ಈತನು ದ್ವಿಚಕ್ರ ವಾಹನದಲ್ಲಿ ಶೀಂದ್ರಾ ಬ್ರಿಡ್ಜ್ ಬಳಿ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಒಂದು ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ ನನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.










