ಆನ್ ಲೈನ್ ಮೂಲಕ ಆಧಾರ್ ತಿದ್ದುಪಡಿ ಸಾಧ್ಯವಿಲ್ಲ : ಯುಐಡಿಎಐ ನಿಯಮಗಳಲ್ಲಿ ಮಹತ್ವದ ಬದಲಾವಣೆ

545

ನವದೆಹಲಿ: ಈ ಹಿಂದೆ ಆನ್ಲೈನ್ ಮೂಲಕ ನಮ್ಮ ಆಧಾರ್ ನ ಮಾಹಿತಿಗಳನ್ನು ತಿದ್ದುವ ಅವಕಾಶವಿತ್ತು. ಆದ್ರೀಗ ಆನ್ಲೈನ್ ಮೂಲಕ ಎಲ್ಲ ಮಾಹಿತಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯುಐಡಿಎಐ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ.ಈ ಬದಲಾವಣೆಯಡಿ ಆಧಾರ್ ಮಾಹಿತಿಯನ್ನು ಸುಲಭವಾಗಿ ತಿದ್ದಲು ಸಾಧ್ಯವಿಲ್ಲ. ಈ ಹಿಂದೆ ಹೆಸರು, ವಿಳಾಸ ಸೇರಿದಂತೆ ಕೆಲ ಮಾಹಿತಿಯನ್ನು ತಿದ್ದುಪಡಿ ಮಾಡಬಹುದಿತ್ತು. ಆದ್ರೀಗ ವಿಳಾಸವನ್ನು ಮಾತ್ರ ಆನ್ಲೈನ್ ಮೂಲಕ ತಿದ್ದುಪಡಿ ಮಾಡಬಹುದು. ಉಳಿದ ಮಾಹಿತಿ ತಿದ್ದುಪಡಿಗೆ ನೀವು ಆಧಾರ್ ನವೀಕರಣ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಈ ಹಿಂದೆ ಯುಐಡಿಎಐ ವೆಬ್ಸೈಟ್ ಗೆ ಹೋಗಿ ನಿಮ್ಮ ಹೊಸ ಫೋನ್ ನಂಬರನ್ನು ಆರಾಮವಾಗಿ ಆಧಾರ್ ಗೆ ಲಿಂಕ್ ಮಾಡಬಹುದಿತ್ತು. ಆದ್ರೆ ಈ ಸೌಲಭ್ಯವನ್ನೂ ಯುಐಡಿಎಐ ರದ್ದು ಮಾಡಿದೆ. ನಿಮ್ಮ ಇನ್ನೊಂದು ಮೊಬೈಲ್ ನಂಬರ್ ಆಧಾರ್ ಜೊತೆ ಲಿಂಕ್ ಮಾಡಲು ಇನ್ಮುಂದೆ ಸಾಧ್ಯವಿಲ್ಲ.

LEAVE A REPLY

Please enter your comment!
Please enter your name here